ವಿಟ್ಲ: ಸಿಎಬಿ, ಸಿಎಎ ತಂದ ಬಳಿಕ ಎನ್‌ಸಿಆರ್ ಜಾರಿಗೆ ತರಲಾಯಿತು. ಆದರೆ ಇನ್ನು ಸೆನ್ಸಸ್ ಮತ್ತು ಎನ್‌ಪಿಆರ್ ಮಾಹಿತಿಗಾಗಿ ಮನೆಮನೆಗೆ ಬರುತ್ತಾರೆ. ಆಗ ಸೆನ್ಸಸ್‌ಗೆ ಮಾಹಿತಿ ಕೊಡಬಹುದು. ಎನ್‌ಪಿಆರ್ ಕೇಳಲು ಬಂದವರನ್ನು ಚಾ, ಕಾಫಿ ಕೊಟ್ಟು ಕಳುಹಿಸಬೇಕು ಎಂದು ಮಾಜಿ ಡಿಸಿ ಶಶಿಕಾಂತ ಸೆಂಥಿಲ್ ಹೇಳಿದರು.
ವಿಟ್ಲ ಕೇಂದ್ರ ಜುಮಾ ಮಸೀದಿ ವಠಾರದಲ್ಲಿ ಎನ್‌ಆರ್‌ಸಿ ಮತ್ತು ಸಿಎಎ ವಿರುದ್ಧ ವಿಟ್ಲ ಮುಸ್ಲಿಂ ಒಕ್ಕೂಟದ ವತಿಯಿಂದ ಶುಕ್ರವಾರ ನಡೆದ ಬೃಹತ್ ಪ್ರತಿಭಟನ ಸಮಾವೇಶದಲ್ಲಿ ಮಾತನಾಡಿದ ಅವರು ಎನ್‌ಆರ್‌ಸಿ ಬದಲು ನಿರುದ್ಯೋಗಿಗಳ ಸಮೀಕ್ಷೆ ನಡೆಯಲಿ ಎಂದರು.
ಈ ಕಾಯ್ದೆಯಡಿ 19 ಲಕ್ಷ ನಾಗರಿಕ ರನ್ನು ಹೊರದಬ್ಬುತ್ತೇವೆ ಅನ್ನುತ್ತಾರೆ. ಆದರೆ ಭಾರತದಲ್ಲೇ ಹುಟ್ಟಿದ ನಾಗರಿಕ ರನ್ನು ಹೊರದಬ್ಬುವುದು ಸಾಧ್ಯವೇ? ಗಾಂಧೀಜಿಯವರ ಅಹಿಂಸಾ ತಣ್ತೀದಡಿ ಹೋರಾಡೋಣ ಎಂದರು.
ಕಾರ್ಡ್ ಚಳವಳಿ
ವಿಟ್ಲ ಮುಸ್ಲಿಂ ಒಕ್ಕೂಟವು ಸಿಎಎ /ಎನ್‌ಆರ್‌ಸಿ ವಿರುದ್ಧ ಸರ್ವೋಚ್ಚ ನ್ಯಾಯಾಲಯಕ್ಕೆ ಕಳುಹಿಸಲಿರುವ ಪೋಸ್ಟ್‌ಕಾರ್ಡ್ ಚಳವಳಿಗೆ ಶಶಿಕಾಂತ ಸೆಂಥಿಲ್ ಸಹಿ ಹಾಕುವ ಮೂಲಕ ಚಾಲನೆ ನೀಡಿದರು.
ಸಾಮಾಜಿಕ ಹೋರಾಟಗಾರ ನಿಕೇತ್‌ರಾಜ್ ಮೌರ್ಯ, ವಿಟ್ಲ ಮುಸ್ಲಿಂ ಒಕ್ಕೂಟದ ಗೌರವಾಧ್ಯಕ್ಷ, ಜಿ.ಪಂ. ಸದಸ್ಯ ಎಂ.ಎಸ್.ಮಹಮ್ಮದ್, ಮಹಮ್ಮದ್ ಕುಂಞಿ ವಿಟ್ಲ, ಅನೀಸ್ ಕೌಸರಿ, ಸಿರಾಜುದ್ದೀನ್ ಸಖಾಫಿ, ಹನೀಫ್ ಖಾನ್ ಕೊಡಾಜೆ, ಎ.ಕೆ. ಅಶ್ರಫ್, ವಿ.ಎಚ್ ಅಶ್ರಫ್, ಮುರಳೀಧರ ರೈ ಮಠಂತಬೆಟ್ಟು, ರಮಾನಾಥ ವಿಟ್ಲ, ಅಬ್ಟಾಸ್ ಅಲಿ, ವಿ.ಎಂ.ಇಬ್ರಾಹಿಂ, ಅಥಾವುಲ್ಲ ಜೋಕಟ್ಟೆ, ಜಾಫರ್ ಫೈಝಿ ಉಪಸ್ಥಿತರಿದ್ದರು.