ಮಾಡಲು ಸಾಧ್ಯ ಎಂದು ಪತ್ರಕರ್ತ, ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ದಿ ಆರ್ಟ್ ಇಂಟಿಗ್ರೇಶನ್ ಚಿತ್ರಕಲಾ ಮಹಾವಿದ್ಯಾಲಯದ ಅಂಕುರ್ ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಲಾಗಿದ್ದ ಹಿರಿಯ ಚಿತ್ರಕಲಾವಿದ ಬಾಬುರಾವ್ ಎಚ್. ಅವರ ಚಿತ್ರ ಮತ್ತು ಮುದ್ರಣ ಕಲಾಕೃತಿಗಳ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಬದುಕನ್ನು ಕಟ್ಟಿಕೊಳ್ಳುವಾಗ ಕ್ರಿಯಾಶೀಲತೆ ಮುಖ್ಯವಾಗುತ್ತದೆ. ಸೃಜನೇತರಕ್ಕಿಂತ ಸೃಜನಶೀಲ ಮಾಧ್ಯಮವು ಬದುಕನ್ನು, ದೇಶವನ್ನು ಕಟ್ಟುತ್ತದೆ ಎಂದರು.
Advertisement
ಅಧ್ಯಕ್ಷತೆ ವಹಿಸಿದ್ದ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಂಶುಪಾಲ ಎಂ.ಎಸ್. ಬೆಳಮಗಿ ಮಾತನಾಡಿ, ಚಿತ್ರಕಲೆಯಲ್ಲಿ ಎರಡು ಪ್ರಕಾರಗಳಿವೆ. ಕಲಾ ಬದ್ಧ ಮತ್ತು ದೇಶ ಬದ್ಧ. ಕಲಾ ಬದ್ಧ ವೈಯಕ್ತಿಕವಾದರೆ, ದೇಶ ಬದ್ಧ ವ್ಯಾಪ್ತಿ ವಿಸ್ತಾರ ದೊಡ್ಡದು ಎಂದರು. ಕಲಾವಿದರು ಚಿತ್ರಿಸುವ ಕಲಾಕೃತಿಗಳು ಪ್ರೇಕ್ಷಕರ ಮನಸೂರೆಗೊಳ್ಳುವುದಲ್ಲದೇ ಅನೇಕ ರೀತಿಯ ಸಾಮಾಜಿಕ ಸಂದೇಶಗಳನ್ನು ನೀಡುತ್ತವೆ ಎಂದು ಹೇಳಿದರು.