Advertisement

ಜಿಲ್ಲೆಯಲ್ಲಿ ಡೆಂಗ್ಯೂ-ಮಲೇರಿಯಾ ಸದ್ಯ ನಿಯಂತ್ರಣದಲ್ಲಿ

08:33 PM Oct 05, 2021 | Team Udayavani |

ಮಹಾನಗರ: ಹವಾಮಾನ ವೈಪರೀತ್ಯದ ಕಾರಣ ಡೆಂಗ್ಯೂ ಮತ್ತು ಮಲೇರಿಯಾ ಹಾವಳಿಯ ಭೀತಿ ಇದ್ದರೂ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಈ ಎರಡೂ ರೋಗ ಸದ್ಯ ನಿಯಂತ್ರಣದಲ್ಲಿವೆ.

Advertisement

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕರಾವಳಿಯಲ್ಲಿ ಮಲೇರಿಯಾ, ಡೆಂಗ್ಯೂ ಪ್ರಕರಣಗಳ ಸಂಖ್ಯೆ ಸರಾಸರಿ ಶೇ.35ರಷ್ಟು ಕಡಿಮೆ ಎಂಬುದು ಆರೋಗ್ಯ ಇಲಾಖೆಯ ಅಂಕಿ-ಅಂಶಗಳಿಂದ ಸ್ಪಷ್ಟವಾಗುತ್ತದೆ.

ದ.ಕ. ಜಿಲ್ಲೆಯಲ್ಲಿ ಈ ವರ್ಷದಲ್ಲಿ ಇದುವರೆಗೆ (ಜನವರಿಯಿಂದ) ಮಲೇ ರಿಯಾ 577 ಪ್ರಕರಣ ಹಾಗೂ ಡೆಂಗ್ಯೂ 193 ಪ್ರಕರಣಗಳು ವರದಿಯಾಗಿವೆ. ಉಡುಪಿ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣ 317 ಹಾಗೂ ಮಲೇರಿಯಾ ಪ್ರಕರಣಗಳು 23 ಪ್ರಕರಣಗಳು ವರದಿಯಾಗಿವೆ. ಅಧಿಕೃತ ಮಾಹಿತಿ ಪ್ರಕಾರ ಉಭಯ ಜಿಲ್ಲೆಗಳಲ್ಲಿ ಈ ಎರಡೂ ಕಾಯಿಲೆಗಳಿಂದ ಈ ವರ್ಷ ಯಾವುದೇ ಸಾವು ಸಂಭವಿಸಿಲ್ಲ.

ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆಯಲ್ಲಿ ಇತ್ತೀಚೆಗೆ ಶಂಕಿತ ಡೆಂಗ್ಯೂವಿನಿಂದ ಸಾವನ್ನಪ್ಪಿದ್ದಾರೆ ಎಂಬ ವರದಿಯನ್ನು ಆರೋಗ್ಯ ಇಲಾಖೆ ತಳ್ಳಿ ಹಾಕಿದೆ. ಅದು ಡೆಂಗ್ಯೂ ಪ್ರಕರಣ ಅಲ್ಲ; ಆ ವ್ಯಕ್ತಿಯ ಸಾವಿಗೆ ನಿಮೋನಿಯಾ ಕಾರಣ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:ಪಿಲಿಕುಳದ ಹನುಮಾನ್‌ ಲಂಗೂರ್‌ “ರಾಜು’ ಸಾವು

Advertisement

ಚಿಕುನ್‌ಗುನ್ಯಾ ಇಲ್ಲ
ದ.ಕ. ಜಿಲ್ಲೆಯಲ್ಲಿ ಎರಡು ವರ್ಷಗಳಿಂದ ಚಿಕುನ್‌ಗುನ್ಯಾ ಕಾಯಿಲೆಯ ಯಾವುದೇ ಪ್ರಕರಣ ವರದಿಯಾಗಿಲ್ಲ. 2015ರಲ್ಲಿ 4 ಪ್ರಕರಣ, 2016ರಲ್ಲಿ ಒಂದು, 2017ರಲ್ಲಿ ಐದು ಪ್ರಕರಣಗಳು ವರದಿಯಾಗಿದ್ದವು. 2018ರಲ್ಲಿ ಯಾವುದೇ ಪ್ರಕರಣ ಕಂಡುಬಂದಿಲ್ಲ. 2919ರಲ್ಲಿ 17 ಚಿಕುನ್‌ಗುನ್ಯಾ ಪ್ರಕರಣಗಳು ವರದಿಯಾಗಿದ್ದವು.

ದ.ಕ. ಜಿಲ್ಲೆಯಲ್ಲಿ ಕೆಲವು ವರ್ಷಗಳಿಂದ ಮಲೇರಿಯಾ, ಡೆಂಗ್ಯೂ ಪ್ರಕರಣಗಳು ಇಳಿಕೆ ಕಾಣುತ್ತಿವೆ. ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳ ತಡೆಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಡೆಂಗ್ಯೂ ತಡೆಯುವ ನಿಟ್ಟಿನಲ್ಲಿ ಲಾರ್ವಾ ಸಮಿಕ್ಷೆ ಹಾಗೂ ಮಲೇರಿಯಾ ತಡೆಯಲು ಸಕ್ರಿಯ ರಕ್ತ ಲೇಪನ ಅಭಿಯಾನ ನಡೆಸಲಾಗಿದೆ. ಅಧಿಕಾರಿಗಳು ಮನೆ ಮನೆಗೆ, ನಿರ್ಮಾಣ ಹಂತದ ಕಟ್ಟಡ ಪ್ರದೇಶಕ್ಕೆ ಆಗಿಂದಾಗ್ಗೆ ತೆರಳಿ ಸ್ಥಳದಲ್ಲಿಯೇ ಮಲೇರಿಯಾ ರ್ಯಾಪಿಡ್‌ ತಪಾಸಣೆ ನಡೆಸುತ್ತಾರೆ. ಪಾಸಿಟಿವ್‌ ಬಂದರೆ ಯಾವ ಹಂತದಲ್ಲಿ ಎಂದು ತಿಳಿಯಲು ರಕ್ತ ಲೇಪನ ಪರೀಕ್ಷೆ ನಡೆಸಲಾಗುತ್ತದೆ ಎಂದು ಆರೋಗ್ಯ ಇಲಾಖೆಯ ಕಚೇರಿ ಮೂಲಗಳು ತಿಳಿಸಿವೆ.

ನಿಯಂತ್ರಣದಲ್ಲಿ
ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಡೆಂಗ್ಯೂ ಮತ್ತು ಮಲೇರಿಯಾ ಕಾಯಿಲೆಗಳೆರಡೂ ನಿಯಂತ್ರಣದಲ್ಲಿವೆ. ಈ ಕಾಯಿಲೆಗಳು ಮುಂದಿನ ದಿನಗಳಲ್ಲಿ ಬಾರದಂತೆ ತಡೆಯ¸ ೇಕು. ಜನರ ಅಜಾಗ್ರತೆಯಿಂದಲೇ ಇಂತಹ ಕಾಯಿಲೆಗಳು ಬರುವುದಾದ್ದರಿಂದ ಜನರು ಜಾಗೃತರಾಗಿ ಜಿಲ್ಲಾ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕು.
-ಡಾ| ನವೀನ್‌ ಚಂದ್ರ ಕುಲಾಲ್‌, ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ, ದ.ಕ. ಜಿಲ್ಲೆ

– ಹಿಲರಿ ಕ್ರಾಸ್ತಾ

Advertisement

Udayavani is now on Telegram. Click here to join our channel and stay updated with the latest news.

Next