Advertisement

ಅಂಡರ್‌ 16 ಕ್ರಿಕೆಟ್‌: ಮ್ಯಾಕ್ನಿಲ್‌ ಅಜೇಯ 140

10:01 AM Oct 26, 2017 | |

ಬೆಂಗಳೂರು: ಕೆಎಸ್‌ಸಿಎ ಆಶ್ರಯದಲ್ಲಿ ನಡೆಯುತ್ತಿರುವ ಅಂಡರ್‌ 16 ಅಂತರ್‌ ವಲಯ ಕ್ರಿಕೆಟ್‌ ಕೂಟದಲ್ಲಿ ಮಂಗಳೂರು ವಲಯ ತಂಡವು ಬೆಂಗಳೂರಿನ ಸಂಯುಕ್ತ ನಗರ ತಂಡದ ವಿರುದ್ಧ ಮೊದಲ ಇನ್ನಿಂಗ್ಸ್‌ ಮುನ್ನಡೆಯ ಆಧಾರದಲ್ಲಿ ಮೇಲುಗೈ ಸಾಧಿಸಿ ಮೂರಂಕ ಪಡೆಯಿತು.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಸಂಯುಕ್ತ ನಗರ ತಂಡವು ಮಂಗಳೂರು ವಲಯದ ಕರುಂಬಯ್ಯ ಅವರ ದಾಳಿಗೆ ತತ್ತರಿಸಿ 180 ರನ್ನಿಗೆ ಆಲೌಟಾಯಿತು. ಕರುಂಬ 41 ರನ್ನಿಗೆ 5 ವಿಕೆಟ್‌ ಕಿತ್ತರು. ಇದಕ್ಕುತ್ತರವಾಗಿ ಮ್ಯಾಕ್ನಿಲ್‌ ನರೋನ್ಹ ಅವರ ಅಜೇಯ 140 ರನ್‌ ನೆರವಿನಿಂದ ಮಂಗಳೂರು ವಲಯ ತಂಡವು 5 ವಿಕೆಟಿಗೆ 253 ರನ್‌ ಗಳಿಸಿತು. ಮ್ಯಾಕ್ನಿಲ್‌ 279 ಎಸೆತ ಎದುರಿಸಿ 18 ಬೌಂಡರಿ ಮತ್ತು 1 ಸಿಕ್ಸರ್‌ ನೆರವಿನಿಂದ 140 ರನ್‌ ಹೊಡೆದರು. ಅವರು ಅಝಾನ್‌ ಜತೆಗೆ ಮೊದಲ ವಿಕೆಟಿಗೆ 62 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡಿದ್ದರು.

ಮಂಗಳೂರು ವಲಯವು ಈ ಹಿಂದಿನ ಪಂದ್ಯದಲ್ಲಿ ಧಾರವಾಡದ ತಂಡದ 271 ರನ್ನಿಗೆ ಉತ್ತರವಾಗಿ ಕೇವಲ 88 ರನ್ನಿಗೆ ಆಲೌಟಾಗಿತ್ತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ 29 ರನ್ನಿಗೆ 4 ವಿಕೆಟ್‌ ಕಳೆದುಕೊಂಡ ಬಳಿಕ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು. ಈ ಪಂದ್ಯದಲ್ಲಿ ಧಾರವಾಡ ಮೂರಂಕ ಪಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next