ಲಂಡನ್: ನೈಟ್ ಔಟ್ ಪಾರ್ಟಿ ಮುಗಿಸಿಕೊಂಡು ಹೊರಟ ಯುವಕನಿಗೆ ಊಬರ್ ಶಾಕ್ ಕೊಟ್ಟಿರುವ ಘಟನೆ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ನಡೆದಿದೆ.
ಸ್ಯಾಮ್ ಜಾರ್ಜ್(21) ಹೆಸರಿನ ಯುವಕ ಡಿ.27ರಂದು ಸ್ನೇಹಿತರೊಂದಿಗೆ ನೈಟ್ ಔಟ್ ಪಾರ್ಟಿ ಮಾಡಿದ್ದಾನೆ.
ಮುಂಜಾನೆ 3.30ರ ಸಮಯಕ್ಕೆ ಊಬರ್ ಬುಕ್ ಮಾಡಿದ ಆತ, ಇಬ್ಬರು ಸ್ನೇಹಿತರನ್ನು ಅದರಲ್ಲೇ ಡ್ರಾಪ್ ಮಾಡಿ ಮನೆಗೆ ತೆರಳಿದ್ದಾನೆ. ಊಬರ್ ಕಾರು ಅರ್ಧ ಗಂಟೆಯಲ್ಲಿ 19 ಕಿ.ಮೀ ಕ್ರಮಿಸಿ ಈ ಮೂವರನ್ನೂ ಡ್ರಾಪ್ ಮಾಡಿದೆ.
ಆನ್‌ಲೈನ್ ಪೇಮೆಂಟ್ ಆಯ್ಕೆ ಮಾಡಿದ್ದ ಆತ, ಊಬರ್ ಶುಲ್ಕ ಎಷ್ಟಾಯಿತು ಎನ್ನುವುದನ್ನೂ ನೋಡಿಲ್ಲ. ಬೆಳಗ್ಗೆ ಎದ್ದು ನೋಡಿದಾಗ ಆತನಿಗೆ ಶಾಕ್ ಆಗಿದೆ. ಕೇವಲ ಅರ್ಧ ಗಂಟೆಯ ಪ್ರಯಾಣಕ್ಕೆ ಊಬರ್ 10,500 ರೂ. ಶುಲ್ಕ ವಿಧಿಸಿದೆ. ಪೂರ್ತಿ ನೈಟ್ ಔಟ್ ಪಾರ್ಟಿಯ ಖರ್ಚಿಗಿಂತ ಊಬರ್ ಶುಲ್ಕವೇ ಹೆಚ್ಚಾಗಿದ್ದಾಗಿ ಆತ ಹೇಳಿಕೊಂಡಿದ್ದಾನೆ.
ಇದನ್ನೂ ಓದಿ:ನಾಗಮಂಗಲ: ಬಸ್ ಢಿಕ್ಕಿ; ಕಾರಿನಲ್ಲಿದ್ದ ನವ ದಂಪತಿ ಸೇರಿ, ಮೂವರು ದಾರುಣ ಸಾವು