Advertisement

ಪ್ರಧಾನಿ ಭೇಟಿ ಸಿಗದ್ದಕ್ಕೆ ಬಸ್‌ಗೆ ಕಿಚ್ಚಿಟ್ಟರು

06:00 AM Sep 20, 2018 | |

ವಾರಾಣಸಿ: ಉತ್ತರ ಪ್ರದೇಶವನ್ನು ವಿಭಜಿಸಿ ಪ್ರತ್ಯೇಕ ಪೂರ್ವಾಂಚಲ ರಾಜ್ಯ ರಚಿಸಬೇಕು. ಅದಕ್ಕಾಗಿ ಪ್ರಧಾನಿ ಮೋದಿಗೆ ಮನವಿ ಸಲ್ಲಿಸಲು ಅವಕಾಶ ಕೊಟ್ಟಿಲ್ಲವೆಂದು ಆರೋಪಿಸಿ ಪೂರ್ವಾಂಚಲ ಜನ ಆಂದೋಲನ ಸಮಿತಿಯ ಕಾರ್ಯದರ್ಶಿ ವಂದನಾ ರಘುವಂಶಿ  ಬಸ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ವಾರಾಣಸಿಯಲ್ಲಿ ಈ ಘಟನೆ ನಡೆದಿದೆ. ವಾರಾಣಸಿಯಿಂದ ಲಕ್ನೋಗೆ ತೆರಳುತ್ತಿದ್ದ ಬಸ್‌ಗೆ ಹತ್ತಿದ್ದ ಅವರು ಜನರನ್ನೆಲ್ಲ ಇಳಿಸಿ, ಪೆಟ್ರೋಲ್‌ ಚೆಲ್ಲಿ ಬೆಂಕಿ ಹಚ್ಚಿದ್ದಾರೆ. ಸುದ್ದಿ ತಿಳಿದ ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಸೋಮವಾರ ಮತ್ತು ಮಂಗಳವಾರ ಪ್ರಧಾನಿ ವಾರಾಣಿಸಿಗೆ ಭೇಟಿ ನೀಡಿದ್ದ ವೇಳೆ ಅವರ ಭೇಟಿಗೆ ಅನುಮತಿ ಕೋರಿದ್ದರೂ, ಅವಕಾಶ ನಿರಾಕರಿಸಲಾಗಿತ್ತು. ಪೊಲೀಸರು ತಮ್ಮನ್ನು ತಡೆದು ನಿಲ್ಲಿಸಿದರು ಎಂದು ದೂರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next