ನವದೆಹಲಿ: ಅಮೆರಿಕದ ನ್ಯೂಯಾರ್ಕ್ನಿಂದ ನವದೆಹಲಿ ಮಾರ್ಗದ ಏರ್ಇಂಡಿಯಾ ವಿಮಾನದಲ್ಲಿ ಮುರಿದ ಕುರ್ಚಿ ಹಾಗೂ ಜಿರಳೆಗಳು ಕಂಡುಬಂದಿರುವ ಕುರಿತು ಪ್ರಯಾಣಿಕರೊಬ್ಬರು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
“ವಿಶ್ವಸಂಸ್ಥೆಯ ರಾಜತಾಂತ್ರಿಕ ಅಧಿಕಾರಿಯಾಗಿರುವ ನಾನು ಜಗತ್ತಿನಾದ್ಯಂತ ಪ್ರಯಾಣ ಮಾಡಿದ್ದಾನೆ. ಆದರೆ ಏರ್ ಇಂಡಿಯಾ ವಿಮಾನ ಪ್ರಯಾಣವು ನನ್ನ ಕೆಟ್ಟ ಅನುಭವವಾಗಿದೆ,’ ಎಂದು ಅವರು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ, ಪ್ರಯಾಣದ ಅವಧಿಯಲ್ಲಿ ಆದ ಅನುಭವಕ್ಕೆ ವಿಷಾದ ವ್ಯಕ್ತಪಡಿಸಿದೆ. ಇದೇ ವೇಳೆ, ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಅಮೆರಿಕ ಮತ್ತು ಭಾರತ ನಡುವಿನ ಕೆಲವು ಮಾರ್ಗಗಳಿಗೆ ವಿಮಾನಗಳ ಸಂಚಾರ ಪ್ರಮಾಣವನ್ನು ಕಡಿತಗೊಳಿಸಲಾಗುವುದು ಎಂದು ಏರ್ಇಂಡಿಯಾ ತಿಳಿಸಿದೆ.
“ಮುಂದಿನ ಮೂರು ತಿಂಗಳಲ್ಲಿ 100 ಪೈಲಟ್ಗಳು ಸಂಸ್ಥೆಗೆ ಸೇರ್ಪಡೆಯಾಗಲಿದ್ದಾರೆ. ಅಲ್ಲದೇ ಸುಮಾರು 1,400 ವಿಮಾನ ಸಿಬ್ಬಂದಿ ತರಬೇತಿ ಹಂತದಲ್ಲಿದ್ದಾರೆ,’ ಎಂದು ಏರ್ ಇಂಡಿಯಾ ಮುಖ್ಯಸ್ಥ ಕ್ಯಾಂಪೆºಲ್ ವಿಲ್ಸನ್ ತಿಳಿಸಿದ್ದಾರೆ.