Advertisement

ಹೈಸ್ಕೂಲ್‌ಗಳಿಂದ ಅಫ್ಘಾನ್ ಹುಡುಗಿಯರನ್ನು ಹೊರಗಿಡುವುದು ನಾಚಿಕೆಗೇಡು: ವಿಶ್ವಸಂಸ್ಥೆ

02:42 PM Sep 18, 2022 | Team Udayavani |

ಕಾಬೂಲ್: ಅಫ್ಘಾನಿಸ್ಥಾನದ ತಾಲಿಬಾನ್ ಆಡಳಿತಗಾರರು 7 ರಿಂದ 12 ನೇ ತರಗತಿಯ ಬಾಲಕಿಯರಿಗೆ ಶಾಲೆಗಳನ್ನು ಪುನಃ ತೆರೆಯುವಂತೆ ವಿಶ್ವಸಂಸ್ಥೆ ಭಾನುವಾರ ಕರೆ ನೀಡಿದ್ದು, ಅವರನ್ನು ಹೈಸ್ಕೂಲ್‌ನಿಂದ ಹೊರಗಿಡುವ ಕ್ರಮವನ್ನು “ನಾಚಿಕೆಗೇಡು” ಎಂದು ಕರೆದಿದೆ.

Advertisement

ಈ ನೀತಿಯು ಮೂಲಭೂತ ಸ್ವಾತಂತ್ರ್ಯಗಳ ಮೇಲಿನ ಇತರ ನಿರ್ಬಂಧಗಳೊಂದಿಗೆ ಹೆಚ್ಚಿನ ಅಭದ್ರತೆ, ಬಡತನ ಮತ್ತು ಪ್ರತ್ಯೇಕತೆಯ ರೂಪದಲ್ಲಿ ದೇಶದ ಆರ್ಥಿಕ ಬಿಕ್ಕಟ್ಟನ್ನು ಆಳವಾಗಿಸುತ್ತದೆ ಎಂದು ವಿಶ್ವಸಂಸ್ಥೆ ಹೆಣ್ಣು ಮಕ್ಕಳ ಶಿಕ್ಷಣದ ಕುರಿತು ಕಾಳಜಿ ವಹಿಸಿದೆ.

ಇದನ್ನೂ ಓದಿ: ಚೀನದಲ್ಲಿ ಬಸ್ ಪಲ್ಟಿಯಾಗಿ 27 ಜನ ಸಾವು, ಹಲವರಿಗೆ ಗಾಯ

“ಇದು ದುರಂತ, ಅವಮಾನಕರ ಮತ್ತು ಸಂಪೂರ್ಣವಾಗಿ ತಪ್ಪಿಸಬಹುದಾಗಿದೆ” ಎಂದು ಅಫ್ಘಾನಿಸ್ಥಾನದಲ್ಲಿ ಯುಎನ್ ಮಿಷನ್‌ನ ಕಾರ್ಯನಿರ್ವಾಹಕ ಮುಖ್ಯಸ್ಥ ಮಾರ್ಕಸ್ ಪೊಟ್ಜೆಲ್ ಹೇಳಿದ್ದಾರೆ.

ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ಒಂದು ವರ್ಷದ ನಂತರ, ತಾಲಿಬಾನ್ ನೇತೃತ್ವದ ಸರಕಾರದಲ್ಲಿ ಹದಿಹರೆಯದ ಹುಡುಗಿಯರನ್ನು ಇನ್ನೂ ಶಾಲೆಯಿಂದ ನಿರ್ಬಂಧಿಸಲಾಗಿದೆ. ಮಹಿಳೆಯರು ಸಾರ್ವಜನಿಕವಾಗಿ ತಲೆಯಿಂದ ಮೊಣಕಾಲಿನ ವರೆಗೆ ಬಟ್ಟೆಗಳನ್ನು ಧರಿಸಿ, ತಮ್ಮ ಕಣ್ಣುಗಳನ್ನು ಮಾತ್ರ ತೋರಿಸಬೇಕು ಎಂಬ ಕಟ್ಟಪ್ಪಣೆ ಇದೆ.

Advertisement

ಹುಡುಗಿಯರು ತರಗತಿಗೆ ಮರಳಲು ಅನುವು ಮಾಡಿಕೊಡುವ ವಿವಿಧ ಭರವಸೆಗಳನ್ನು ಈಡೇರಿಸುವಲ್ಲಿ ತಾಲಿಬಾನ್ ವಿಫಲವಾಗಿದೆ. ನಿಷೇಧವು ಪ್ರಾಥಮಿಕವಾಗಿ 12 ರಿಂದ 18 ವರ್ಷ ವಯಸ್ಸಿನ ಹುಡುಗಿಯರ ಮೇಲೆ ಪರಿಣಾಮ ಬೀರಿದೆ.

Advertisement

Udayavani is now on Telegram. Click here to join our channel and stay updated with the latest news.

Next