Advertisement

ಐಪಿಎಲ್ ನಲ್ಲಿ ಹೊಸ ದಾಖಲೆ ಬರೆದ ಜಮ್ಮು ಕಾಶ್ಮೀರದ ಉಮ್ರಾನ್ ಮಲಿಕ್

02:42 PM Oct 07, 2021 | Team Udayavani |

ಅಬುಧಾಬಿ: 14ನೇ ಆವೃತ್ತಿಯ ಐಪಿಎಲ್ ಕೂಟ ಅಂತಿಮ ಹಂತ ತಲುಪುತ್ತಿದೆ. ಕೂಟದುದ್ದಕ್ಕೂ ನೀರಸ ಪ್ರದರ್ಶನ ನೀಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಬುಧವಾರ ಆರ್ ಸಿಬಿ ವಿರುದ್ಧ ಜಯ ಸಾಧಿಸಿದೆ.

Advertisement

ಸನ್ ರೈಸರ್ಸ್ ಹೈದರಾಬಾದ್ ತಂಡದ ಹೊಸ ಪ್ರತಿಭೆ ಉಮ್ರಾನ್ ಮಲಿಕ್ ಈಗ ಭಾರೀ ಸದ್ದು ಮಾಡುತ್ತಿದ್ದಾರೆ. ತನ್ನ ಎಕ್ಸ್ ಪ್ರೆಸ್ ವೇಗದಿಂದ ಸದ್ದು ಮಾಡುತ್ತಿರುವ ಉಮ್ರಾನ್ ಮಲಿಕ್ ಭಾರತದ ಹೊಸ ವೇಗದ ಸೆನ್ಸೇಶನ್ ಆಗಿದ್ದಾರೆ.

ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಸತತ 150 ಕಿ.ಮೀ ಪ್ರತಿ ಗಂಟೆ ವೇಗದಲ್ಲಿ ಬೌಲಿಂಗ್ ಮಾಡಿದ ಉಮ್ರಾನ್ ಮಲಿಕ್ ಹೊಸ ದಾಖಲೆ ಬರೆದರು. 9ನೇ ಓವರ್ ಎಸೆದ ಉಮ್ರಾನ್ ಮಲಿಕ್ ಆ ಓವರ್ ನ ನಾಲ್ಕನೇ ಎಸೆತವನ್ನು153 ಕಿ.ಮೀ ಪ್ರತಿ ಗಂಟೆ ವೇಗದಲ್ಲಿ ಎಸೆದರು. 2021ರ ಐಪಿಎಲ್ ನಲ್ಲಿ ಇದು ಅತೀ ವೇಗದ ಎಸೆತವಾಗಿದೆ.

ಇದನ್ನೂ ಓದಿ:ಬಿಗ್‌ಬಾಸ್‌ : ಶಮಿತಾ ಶೆಟ್ಟಿಯನ್ನು ಆಂಟಿ ಎಂದು ಸಂಭೋದಿಸಿದ್ದಕ್ಕೆ ಆಕೆಯ ತಾಯಿಯಿಂದ ವಿರೋಧ

ಬುಧವಾರದ ಪಂದ್ಯದಲ್ಲಿ ಹೈದರಾಬಾದ್ ತಂಡ ನಾಲ್ಕು ರನ್ ಗಳ ಜಯ ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ಏಳು ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿದರೆ, ಆರ್ ಸಿಬಿ ತಂಡ 137 ರನ್ ಮಾತ್ರ ಗಳಿಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next