Advertisement

ಡಿಆರ್‌ಎಸ್‌ಗೆ ಮನವಿ ಬೇಡ: ಅಂಪೈರ್‌ರಿಂದಲೇ ಸಲಹೆ, ಅನಿಲ್‌ ಚೌಧರಿ ವಿವಾದ!

04:09 PM Oct 29, 2020 | keerthan |

ದುಬೈ: ಈ ಘಟನೆಯನ್ನು ಏನೆನ್ನಬೇಕೋ ತಿಳಿಯುತ್ತಿಲ್ಲ. ತಲೆ ಓಡದಿದ್ದರಿಂದ ನಡೆದಧ್ದೋ, ಉದ್ದೇಶಪೂರ್ವಕವಾಗಿಯೇ ಆಗಿಧ್ದೋ? ಅಂತೂ ಮಂಗಳವಾರ ಡೆಲ್ಲಿ ಮತ್ತು ಹೈದರಾಬಾದ್‌ ನಡುವಿನ ಐಪಿಎಲ್‌ ಪಂದ್ಯದಲ್ಲಿ ಅಂಪೈರ್‌ ಅನಿಲ್‌ ಚೌಧರಿ ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ.

Advertisement

ಹೈದರಾಬಾದ್‌ನ ಬೃಹತ್‌ ಮೊತ್ತವನ್ನು ಡೆಲ್ಲಿ ಬೆನ್ನತ್ತುತ್ತಿತ್ತು. ಆಗ ಡೆಲ್ಲಿಯ ಆರ್‌.ಅಶ್ವಿ‌ನ್‌ ಕ್ರೀಸ್‌ನಲ್ಲಿದ್ದರು, ಸಂದೀಪ್‌ ಶರ್ಮ ಬೌಲಿಂಗ್‌ ಮಾಡುತ್ತಿದ್ದರು. ಆ ವೇಳೆ ಅಶ್ವಿ‌ನ್‌ ಹೊಡೆತವೊಂದು ಪ್ಯಾಡ್‌ಗೆ ಬಡಿಯಿತು. ಅಂಪೈರ್‌ ಔಟಲ್ಲ ಎಂದು ತೀರ್ಪಿತ್ತರು. ಆಗ ಚೌಧರಿ ತಮ್ಮ ಕೈಬೆರಳಿನ ನಲ್ಲಿ ಬಡಿದು, ಡಿಆರ್‌ಎಸ್‌ಗೆ ಮನವಿ ಮಾಡಬೇಡಿ, ಚೆಂಡು ಬ್ಯಾಟ್‌ಗೆ ಬಡಿದಿದೆ ಎಂದು ಹೈದರಾಬಾದ್‌ ಕ್ಷೇತ್ರರಕ್ಷಕರಿಗೆ ತಿಳಿಸಿದರು.

ಐಪಿಎಲ್‌ ನಿಯಮಗಳ ಪ್ರಕಾರ ಈ ವಿಚಾರದಲ್ಲಿ ಅಂಪೈರ್‌ ಸಹಾಯವನ್ನು ಆಟಗಾರರೂ ಕೇಳುವಂತಿಲ್ಲ, ಅಂಪೈರ್‌ ಕೂಡಾ ಕೊಡುವಂತಿಲ್ಲ. ಆದರೆ ಅಂಪೈರ್ ಅನಿಲ್ ಚೌಧರಿ ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿದರೂ ಅಥವಾ ಅಚಾತುರ್ಯದಿಂದ ನಡೆಯಿತೋ ತಿಳಿದಿಲ್ಲ. ಅಂದಹಾಗೆ ಆ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಡಿಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿಯಾಗಿ ಜಯ ಸಾಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next