ಇಂದೋರ್: ಭಾರತ ವಿರುದ್ಧದ 3ನೇ ಟೆಸ್ಟ್‌ನಲ್ಲಿ ಗೆಲ್ಲಲು ಆಸ್ಟ್ರೇ ಲಿಯಕ್ಕೆ ಕೇವಲ 76 ರನ್ ಬೇಕಾಗಿದೆ. ಆದರೆ ಪಿಚ್‌ನಲ್ಲಿ ಏನೂ ಕೂಡ ನಡೆಯ ಬಹುದು ಎಂದು ಭಾರತ ತಂಡದ ವೇಗಿ ಉಮೇಶ್ ಯಾದವ್ ಹೇಳಿದ್ದಾರೆ.
Advertisement
ಈ ಪಿಚ್ ಬಹಳಷ್ಟು ತಿರುವು ಪಡೆಯುತ್ತಿದೆ. ಸಮತೋಲನವಿಲ್ಲದ ಬೌನ್ಸ್ ನಿಂದಾಗಿ ಬ್ಯಾಟ್ಸ್‌ಮನ್‌ಗಳಿಗೆ ಬ್ಯಾಟಿಂಗ್ ಮಾಡಲು ಕಷ್ಟವಾಗುತ್ತಿದೆ. ನಾವು ಸಾಕಷ್ಟು ರನ್ ಗಳಿಸಲಿಲ್ಲ, ಆದರೆ ಗೆಲ್ಲುವ ಅವಕಾಶ ಇದೆ ಎಂದು ಉಮೇಶ್ ತಿಳಿಸಿದರು. ಕ್ರಿಕೆಟ್‌ನಲ್ಲಿ ಏನೂ ಬೇಕಾದರೂ ಆಗಬಹುದು. ನಾವು ನಮ್ಮ ಶ್ರೇಷ್ಠ ನಿರ್ವಹಣೆ ನೀಡಲು ಪ್ರಯತ್ನಿಸಲಿದ್ದೇವೆ ಮತ್ತು ನಿಖರ ದಾಳಿ ಸಂಘಟಿಸಲಿದ್ದೇವೆ ಎಂದು ಉಮೇಶ್ ತಿಳಿಸಿದರು.