Advertisement

ಬೆಳಗಾವಿ ಏರ್ ಪೋರ್ಟ್ ನಲ್ಲಿ ಕತ್ತಿ ಪಾರ್ಥಿವ ಶರೀರ ಆಗಮನಕ್ಕೆ‌ ಕಾಯುತ್ತಿರುವ ಅಭಿಮಾನಿಗಳು

11:47 AM Sep 07, 2022 | Team Udayavani |

ಬೆಳಗಾವಿ: ಆಹಾರ ಸಚಿವ ಉಮೇಶ ಕತ್ತಿ ಹೃದಯಾಘಾತದಿಂದ ನಿಧನರಾಗಿದ್ದು, ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಪಾರ್ಥಿವ ಶರೀರ ಆಗಮನಕ್ಕೆ ಬುಧವಾರ ಬೆಳಗ್ಗೆಯಿಂದ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಕಾಯುತ್ತ ಕುಳಿತಿದ್ದಾರೆ.

Advertisement

ಪಾರ್ಥಿವ ಶರೀರವನ್ನು ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ವಿಶ್ವರಾಜ ಶುಗರ್ಸ್ ಕಾರ್ಖಾನೆ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಬೆಳಗಾವಿಯಿಂದ ಮೆರವಣಿಗೆ ಮೂಲಕ ಬೆಲ್ಲದ ಬಾಗೇವಾಡಿವರೆಗೆ ಪಾರ್ಥಿವ ಶರೀರ ತೆರಳಲಿದೆ. ತೆರೆದ ವಾಹನವನ್ನು ಹೂಗಳಿಂದ ಅಲಂಕಾರ ಮಾಡಲಾಗಿದೆ. ಮಲ್ಲಿಗೆ ಹಾಗೂ ಚೆಂಡು ಹೂವಿನಿಂದ ಅಲಂಕೃತಗೊಳಿಸಲಾಗಿದ್ದು, ಅದರೊಳಗೆ ಬೈಲಹೊಂಗಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮೈನಸ್ 4 ಡಿಗ್ರಿಯ ಡೀಪ್ ಫ್ರಿಜರ್ ವ್ಯವಸ್ಥೆ ಮಾಡಲಾಗಿದೆ.

ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ‌ ಹಾಗೂ ಕಾರಂಜಿ ಮಠದ ಶ್ರೀ ಗುರುಸಿದ್ದ ಸ್ವಾಮೀಜಿ ಬೆಳಗಾವಿ ವಿಮಾನ ನಿಲ್ದಾಣಕ್ಕೆ‌ ಭೇಟಿ ನೀಡಿ ಪಾರ್ಥಿವ ಶರೀರ‌ ಒಯ್ಯುವ ವಾಹನವನ್ನು ಪರಿಶೀಲಿಸಿದರು. ವಾಹನದ‌ಮೇಲೆ ಇರುವ ಉಮೇಶ ಕತ್ತಿ ಭಾವಚಿತ್ರಕ್ಕೆ‌ ನಮನ ಸಲ್ಲಿಸಿದರು.

ಇದನ್ನೂ ಓದಿ : ಅರ್ಚಕನ ಉರಗ ಪ್ರೇಮ : 1500 ಕ್ಕೂ ಹೆಚ್ಚು ಹಾವುಗಳನ್ನು ರಕ್ಷಣೆ ಮಾಡಿದ ಗುರುರಾಜ್

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next