Advertisement

2024ರ ಚುನಾವಣೆ ಬಳಿಕ ರಾಜ್ಯ ವಿಭಜನೆ ಬಗ್ಗೆ ಪ್ರಧಾನಿ ಚಿಂತನೆ : ಸಚಿವ ಉಮೇಶ್ ಕತ್ತಿ

06:27 PM Jun 23, 2022 | Team Udayavani |

ವೇಣೂರು : 2024ರ ಚುನಾವಣೆ ಬಳಿಕ ರಾಜ್ಯವನ್ನು ಇಬ್ಭಾಗ ಮಾಡುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಚಿಂತಿಸಿದ್ದಾರೆ ಎಂದು ರಾಜ್ಯ ಅರಣ್ಯ ಸಚಿವ ಉಮೇಶ್ ಕತ್ತಿ ಸುಳಿವು ನೀಡಿದ್ದಾರೆ.

Advertisement

ಬೆಳ್ತಂಗಡಿ ತಾಲೂಕಿನ ಎರ್ಮೋಡಿ ಅರಣ್ಯ ಪ್ರದೇಶದಲ್ಲಿ ಗುರುವಾರ ಧರ್ಮಸ್ಥಳ ಗ್ರಾ.ಯೋಜನೆಯ ಸಹಯೋಗದಲ್ಲಿ ದಶಲಕ್ಷ ಹಣ್ಣಿನ ಗಿಡಿಗಳ ನಾಟಿ ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಿದ ಸಚಿವ ಕತ್ತಿ ಅವರು ಕಾರ್ಯಕ್ರಮದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು.

ಎರಡೂವರೆ ಕೋಟಿ ಇದ್ದ ರಾಜ್ಯದ ಜನಸಂಖ್ಯೆ ಇಂದು ಆರೂವರೆ ಕೋಟಿಗೆ ಬೆಳೆದು ನಿಂತಿದೆ. ಜನಸಂಖ್ಯೆ ಬೆಳೆದಂತೆ ರಾಜ್ಯಗಳ ವಿಭಜನೆ ಅನಿವಾರ್ಯವಾಗುತ್ತದೆ. ಕರ್ನಾಟಕದಲ್ಲಿ ಎರಡು ರಾಜ್ಯ, ಮಹಾರಾಷ್ಟ್ರದಲ್ಲಿ ಮೂರು ರಾಜ್ಯ, ಉತ್ತರಪ್ರದೇಶದಲ್ಲಿ ನಾಲ್ಕು ರಾಜ್ಯ ಈ ರೀತಿ ವಿಂಗಡಣೆ ಮಾಡುವ ಮೂಲಕ ೫೦ ರಾಜ್ಯಗಳನ್ನು ದೇಶದಲ್ಲಿ ನಿರ್ಮಾಣ ಮಾಡಲು ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ಸರಕಾರದ ಚಿಂತನೆ ನಡೆಸಿದೆ ಎಂದರು.

ಇದನ್ನೂ ಓದಿ : ಶಸ್ತ್ರಚಿಕಿತ್ಸೆ ತೊಡಕು: ಮಾಜಿ ಮಿಸ್ ಬ್ರೆಜಿಲ್ ಗ್ಲೇಸಿ ಕೊರಿಯಾ ನಿಧನ

Advertisement

Udayavani is now on Telegram. Click here to join our channel and stay updated with the latest news.

Next