Advertisement

ಸ್ಪೀಕರ್‌ ರಮೇಶ ಕುಮಾರ್‌ಗೆ ಉಮೇಶ ಜಾಧವ್‌ ಅಭಿನಂದನೆ

11:55 PM Apr 01, 2019 | Team Udayavani |

ಕಲಬುರಗಿ: “ಶಾಸಕತ್ವ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ವಿಧಾನ ಸಭಾಧ್ಯಕ್ಷರು ಅಂಗೀಕಾರಗೊಳಿಸುತ್ತಾರೆ ಎಂಬ ದೃಢ ವಿಶ್ವಾಸವಿತ್ತು’ ಎಂದು ಕಲಬುರಗಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಡಾ| ಉಮೇಶ ಜಾಧವ್‌ ತಿಳಿಸಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ನ್ಯಾಯಕ್ಕೆ ಜಯ ಸಿಕ್ಕಂತಾಗಿದೆ. ಸ್ಪೀಕರ್‌ ಅವ‌ರಿಗೆ ಅಭಿನಂದನೆ ಸಲ್ಲಿಸುವೆ. ರಾಜೀನಾಮೆ ಅಂಗೀಕರಿಸದಿರುವಂತೆ ಹಾಗೂ ಶಾಸಕತ್ವದಿಂದ ಅನರ್ಹತೆಗೊಳಿಸುವಂತೆ ಕೆಲವರು ಸಭಾಧ್ಯಕ್ಷರ ಮೇಲೆ ಒತ್ತಡ ತಂದಿದ್ದರು. ಆದರೂ ಸಭಾಧ್ಯಕ್ಷರು ನ್ಯಾಯದ ಪರ ತೀರ್ಪು ನೀಡಿದ್ದಾರೆ. ದೂರದ ಸಂಬಂಧಿಕರೊಬ್ಬರು ನಿಧನವಾಗಿದ್ದರೂ ಸೋಮವಾರ ಸ್ಪೀಕರ್‌ ಅವರು ಕಚೇರಿಗೆ ಬಂದು ರಾಜೀನಾಮೆ ಅಂಗೀಕರಿಸಿದ್ದಾರೆ. ಅವರು ಅಭಿನಂದನೆಗೆ ಅರ್ಹರಾಗಿದ್ದಾರೆ. ಹಲವು ತಿಂಗಳಿನಿಂದ ಪ್ರಶ್ನೆಯಾಗಿ ಉಳಿದಿದ್ದಕ್ಕೆ ಉತ್ತರ ಸಿಕ್ಕಿದೆ.

ಈಗ ಚುನಾವಣಾ ವೇದಿಕೆಗೆ ಸ್ಪಷ್ಟ ದಾರಿ ಸಿಕ್ಕಂತಾಗಿದೆ ಎಂದರು. ಏ.3ರಂದು ಕಲಬುರಗಿ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಾಗುವುದು. ನಾಮಪತ್ರ ಸಲ್ಲಿಕೆ ವೇಳೆ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಉಪಸ್ಥಿತರಿರುವರು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next