Advertisement
ಕಸೂತಿ ವೈಭವರಾಜಸ್ಥಾನಿ ಎಂದ ಕೂಡಲೇ ಕಣ್ಣ ಮುಂದೆ ಕೆಂಪು, ನೀಲಿ, ಹಸಿರು, ಕೇಸರಿ, ಹಳದಿಯಂಥ ಗಾಢ ಬಣ್ಣಗಳು ಮೂಡುತ್ತವೆ. ಅಂತೆಯೇ ಇಂಥ ಛತ್ರಿಗಳಲ್ಲಿ ಕೂಡ ಗಾಢ ಬಣ್ಣಗಳ ಚಿತ್ತಾರವಿರಲಿದೆ. ಕಪ್ಪು , ಕಂದು, ಬೂದಿ, ಬಿಳಿಯಂಥ ಬಣ್ಣಗಳ ಬಳಕೆ ಕಾಣಸಿಗುವುದಿಲ್ಲ. ಫಡ್ (ಮೇವಾಡ್), ಮಾರು-ಗುರ್ಜರ್, ಕಜರಿ ಮುಂತಾದ ಪ್ರಕಾರದ ರಾಜಸ್ಥಾನಿ ಚಿತ್ರಕಲೆಗಳನ್ನು ಛತ್ರಿಯ ಮೇಲೆ ಮೂಡಿಸಲಾಗುತ್ತಿದೆ. ಚಿತ್ರವನ್ನು ಕೇವಲ ಬಣ್ಣಗಳಲ್ಲಿ ಮಾತ್ರವಲ್ಲ, ಕಸೂತಿ ಕೆಲಸದ ಮೂಲಕವೂ ಬಿಡಿಸುತ್ತಾರೆ. ಚಿತ್ರ ಬಿಡಿಸಲು ತಿಳಿದಿದ್ದರೆ ಅಥವಾ ಕಸೂತಿ ಕೆಲಸ ಗೊತ್ತಿದ್ದರೆ ನೀವು ಸಹ ಛತ್ರಿಗಳ ಮೇಲೆ ಚಿತ್ರ ಬಿಡಿಸಿ, ಪ್ರತಿಭೆ ಹಾಗೂ ಕಲೆಯನ್ನು ಪ್ರದರ್ಶಿಸಬಹುದು.
ಇಂಥ ಛತ್ರಿಯನ್ನು ಬಟ್ಟೆಯಿಂದ ತಯಾರಿಸುವ ಕಾರಣ ಇವುಗಳನ್ನು ಹೆಚ್ಚಾಗಿ ಬಿಸಿಲಿದ್ದಾಗ ಬಳಸಲಾಗುತ್ತದೆ. ಮಳೆಗಾಲದಲ್ಲಿ ಬಳಸುವುದಾದರೆ ಇಂಥ ಛತ್ರಿಗಳಲ್ಲಿ ಬಟ್ಟೆಯ ಕೆಳಗಡೆ ಪ್ಲಾಸ್ಟಿಕ್ ಪದರ ಇರುವ ಕಾರಣ, ನಮ್ಮ ತಲೆ ಒದ್ದೆ ಆಗುವುದಿಲ್ಲ. ಒಂದು ವೇಳೆ, ಛತ್ರಿಯಲ್ಲಿದ್ದ ಬಟ್ಟೆ ಬಣ್ಣ ಬಿಟ್ಟರೂ ಅದರಿಂದ ನಮ್ಮ ಉಡುಪಿಗೆ ತೊಂದರೆ ಆಗುವುದಿಲ್ಲ. ಬಣ್ಣಬಣ್ಣದ ಛತ್ರಿಗಳು
3 ಫೋಲ್ಡ್ ಅಥವಾ 4 ಫೋಲ್ಡ್‌ಗಳಲ್ಲೂ ರಾಜಸ್ಥಾನಿ ಛತ್ರಿಗಳು ಸಿಗುತ್ತವೆ. ಆರಾಮಾಗಿ ಈ ಪುಟ್ಟ ಕೊಡೆಗಳನ್ನು ಬ್ಯಾಗ್‌ನಲ್ಲಿ ಇಟ್ಟುಕೊಳ್ಳಬಹುದು. ಮದುವೆ, ಸೀಮಂತ, ಹುಟ್ಟುಹಬ್ಬ , ನಿಶ್ಚಿತಾರ್ಥ ಮತ್ತು ಪಾರ್ಟಿಗಳಲ್ಲಿ ಥೀಮ್ ಆಗಿಯೂ ಇವುಗಳನ್ನು ಬಳಸುತ್ತಾರೆ. ದಿಬ್ಬಣ ಬರುವಾಗ ಗಂಡಿನ ಕಡೆಯವರು ಇಂಥ ಛತ್ರಿಗಳನ್ನು ಹಿಡಿದಿರುತ್ತಾರೆ. ವಧುವಿನ ಕಡೆಯವರೆಲ್ಲ ಒಂದು ಬಣ್ಣದ ಛತ್ರಿಗಳನ್ನು ಮತ್ತು ವರನ ಕಡೆಯವರೆಲ್ಲ ಇನ್ನೊಂದು ಬಣ್ಣದ ಛತ್ರಿಗಳನ್ನು ಹಿಡಿದು ಫೋಟೊಗೆ ಪೋಸ್ ಕೊಡುತ್ತಾರೆ. ನೋಡಲು ಬಹಳ ಗ್ರ್ಯಾಂಡ್ ಆಗಿರುವ ಕಾರಣ ವೆಡ್ಡಿಂಗ್ ಫೋಟೋಶೂಟ್‌ಗೂ ಇದು ಹೇಳಿ ಮಾಡಿಸಿದಂತಿದೆ!
Related Articles
ಇವುಗಳಲ್ಲಿ ಗೆಜ್ಜೆ , ಮಣಿ, ಕನ್ನಡಿ (ಮಿರರ್ ವರ್ಕ್), ಗೊಂಡೆ (ತುರುಬು ಕಟ್ಟಲು ಬಳಸುವ ಸಿಂಬೆಯಂಥ ಸಾಧನ), ಗಾಜಿನ ಚೂರುಗಳು, ಚಿಕ್ಕಪುಟ್ಟ ಸರಪಳಿ ಮುಂತಾದವುಗಳನ್ನು ಬಳಸಿ ಬಗೆ ಬಗೆಯ ರಂಗೋಲಿಗಳನ್ನು ಬಿಡಿಸಲಾಗುತ್ತದೆ. ಊಹಿಸಲೂ ಸಾಧ್ಯವಾಗದಷ್ಟು ವಿಭಿನ್ನ ಮತ್ತು ವಿಶಿಷ್ಟ ವಿನ್ಯಾಸಗಳಲ್ಲಿ ಇಂಥ ಕೊಡೆಗಳು ಲಭ್ಯ ಇವೆ. ಆನ್‌ಲೈನ್ ಮೂಲಕವೂ ಖರೀದಿಸಬಹುದು. ಇಂಥ ಆಲಂಕಾರಿಕ ವಸ್ತುಗಳಿರುವ ಕಾರಣ, ಅವು ಬಿದ್ದುಹೋಗದಂತೆ ಜಾಗ್ರತೆ ವಹಿಸಬೇಕು.
Advertisement