Advertisement
ಸೋಮವಾರ ಜೈಶಂಕರ್, ಇಸ್ರೇಲ್‌ನ ಉಪ ಪ್ರಧಾನಿ ಹಾಗೂ ವಿದೇಶಾಂಗ ಸಚಿವರೂ ಆಗಿರುವ ಯೈರ್ ಲಪಿಡ್ ಅವರನ್ನು ಭೇಟಿ ಮಾಡಿದರು. ಭೇಟಿಯ ತರುವಾಯ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಫ್ ಟಿಎ ಮಾತುಕತೆಯನ್ನು ಮರುಚಾಲನೆ ಗೊಳಿಸಲಾಗುತ್ತದೆ. ದೀರ್ಘಕಾಲದಿಂದ ನಡೆಯುತ್ತಿರುವ ಈ ಒಪ್ಪಂದ ಆಧಾರಿತ ಚರ್ಚೆಗಳು ಮುಂದಿನ ಜೂನ್ ಹೊತ್ತಿಗೆ ನಿರ್ಣಾಯಕ ಹಂತಕ್ಕೆ ಬರಬಹುದು ಎಂದು ಆಶಿಸಿದ್ದಾರೆ.
Related Articles
ಜೆರುಸಲೇಂ ಅರಣ್ಯದಲ್ಲಿ ಹೊಸದಾಗಿ ಅಳವಡಿಸಲಾಗಿರುವ “ಭೂಡಾನ್ ಗ್ರೂವ್’ ಎಂಬ ವಿವರ ಫಲಕವನ್ನು ಜೈಶಂಕರ್, ಭಾನುವಾರ ಉದ್ಘಾಟಿಸಿದರು. ಇದರಲ್ಲಿ ಭಾರತ-ಇಸ್ರೇಲ್ ನಡುವೆ ರಾಜತಾಂತ್ರಿಕ ಸಂಬಂಧ ಏರ್ಪಡುವ ಮುನ್ನ ಎರಡೂ ದೇಶಗಳ ನಡುವೆ ಇದ್ದ ಆತ್ಮೀಯ ಬಾಂಧವ್ಯದ ಬಗ್ಗೆ ಮಾಹಿತಿಗಳನ್ನು ಈ ಫಲಕದಲ್ಲಿ ಬರೆಯಲಾಗಿದೆ.
Advertisement