ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿ 2019-20ನೇ ಸಾಲಿನ ವಿವಿಧ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ವೃತ್ತಿ ಮತ್ತು ಹವ್ಯಾಸಿ ರಂಗಭೂಮಿ ಕ್ಷೇತ್ರದಲ್ಲಿನ ಸಾಧನೆಗಾಗಿ ಹಿರಿಯ ನಟಿ ಹಾಗೂ ಮಾಜಿ ಸಚಿವೆ ಉಮಾಶ್ರೀ ಅವರು ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿ 50 ಸಾವಿರ ರೂ.ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ.
ವೃತ್ತಿರಂಗಭೂಮಿ ಸೇವೆಗಾಗಿ ಕೆ.ಹಿರಣ್ಣಯ್ಯ ದತ್ತಿ – ವಿಜಯಪುರದ ಲಿಂಗರಾಜು ದಂಡಿನ ಕಲ್ಲೂರ, ಚಿಂದೋಡಿ ವೀರಪ್ಪ ದತ್ತಿ – ಕಲಬುರಗಿಯ ಶಂಕರಪ್ಪ ಹಿಪ್ಪರಗಿ, ಚಿಂದೋಡಿ ಲೀಲಾ ದತ್ತಿ – ಹುಬ್ಬಳ್ಳಿಯ ಅನ್ನಪೂರ್ಣ ಹೊಸಮನಿ ಮತ್ತು ಕೆ.ರಾಮಚಂದ್ರಯ್ಯ ದತ್ತಿ- ಬೆಂಗಳೂರಿನ ಮಾ.ಭಾಸ್ಕರ್ ಆಯ್ಕೆಯಾಗಿದ್ದಾರೆ. ಈ ದತ್ತಿ ಪ್ರಶಸ್ತಿಯು 5 ಸಾವಿರ ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ.
ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ: ಬೆಂಗಳೂರಿನ ಧರ್ಮೇಂದ್ರ ಅರಸು (ನಟನೆ), ವೆಂಕಟೇಶ್ (ನಿರ್ದೇಶನ),ಗಣೇಶ್ ಶೆಣೈ (ನಟ, ಸಂಘಟಕ), ಅರುಣ್ ಸಾಗರ್ (ನಟ, ನಿರ್ದೇಶಕ), ತುಮಕೂರಿನ ಚಿಕ್ಕಹನುಮಂತಯ್ಯ (ಗ್ರಾಮೀಣ ರಂಗಭೂಮಿ), ಹಾಸನದ ಗ್ಯಾರಂಟಿ ರಾಮಣ್ಣ (ಬೀದಿ ನಾಟಕ), ರಾಯಚೂರಿನ ನಾಗಪ್ಪ ಬಳೆ (ನಟ, ನಿರ್ದೇಶನ).
ಬಾಗಲಕೋಟೆಯ ಪ್ರಭಾಕರ ಕುಲಕರ್ಣಿ (ನಟ, ನಿರ್ದೇಶಕ), ವಿಜಯಪುರದ ಗುರುಬಸಪ್ಪ ಕಲ್ಲಪ್ಪ ಸಜ್ಜನ್ (ವೃತ್ತಿ ರಂಗಭೂಮಿ), ಮಂಗಳೂರಿನ ಗೀತಾ ಸುರತ್ಕಲ್ (ನಟಿ), ಲಕ್ಷ್ಮೀಪತಿ ಕೋಲಾರ (ನಾಟಕಕಾರ), ಮಂಡ್ಯದ ಸಣ್ಣಪ್ಪ ಕೊಡಗಳ್ಳಿ ( ನೇಪಥ್ಯ), ಉಡುಪಿಯ ರಾಮಗೋಪಾಲ್ ಶೇಟ್ (ನಟ). ಚಳ್ಳಕೆರೆಯ ಎಸ್.ತಿಪ್ಪೇಸ್ವಾಮಿ ( ಗ್ರಾಮೀಣ ರಂಗಭೂಮಿ), ಹಾವೇರಿಯ ಕೊಟ್ರಪ್ಪ ಚನ್ನಪ್ಪ ಕೊಟ್ರಪ್ಪನವರ್ (ಗ್ರಾಮೀಣ ರಂಗಭೂಮಿ), ಧಾರವಾಡದ ಬಸವರಾಜ ಬಸವಣ್ಣೆಪ್ಪ ಕಡ್ಲಣ್ಣವರ್ (ನಟ), ಗದಗದ ಎಸ್.ಮಂಜಮ್ಮ (ವೃತ್ತಿ ರಂಗಭೂಮಿ), ಸಾಗರದ ಎಚ್.ಎಸ್. ಪ್ರಸನ್ನ (ನಿರ್ದೇಶಕ), ಕಲಬುರ್ಗಿಯ ಈಶ್ವರಪ್ಪ (ಸಂಘಟಕ).
ಕಾಸರಗೋಡಿನ ಉಮೇಶ್ ಸಾಲಿಯಾನ (ಸಂಘಟಕ), ಹೆಗ್ಗೂಡಿನ ಕೆ.ಎಂ.ನಾಗರಾಜ (ರಂಗಸಂಗೀತ), ಚಿಕ್ಕನಾಯಕನಹಳ್ಳಿಯ ವೆಂಕಟೇಶಮೂರ್ತಿ (ನಟ), ಬಳ್ಳಾರಿಯ ಮಾ.ಬ.ಸೋಮಣ್ಣ (ನಟ) ಮತ್ತು ಗದಗದ ವಿಜಯಕುಮಾರ್ (ರಂಗಸಂಗೀತ) ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿ 25 ಸಾವಿರ ನಗದು ಮತ್ತು ಪುರಸ್ಕಾರ ಒಳಗೊಂಡಿದೆ.