Advertisement

ಉಳ್ತೂರು: ಗೋ ಮಾಂಸ ದಂಧೆ ಪತ್ತೆ 

02:52 PM Jan 01, 2018 | Team Udayavani |

ತೆಕ್ಕಟ್ಟೆ (ಉಳ್ತೂರು):  ಕುಂದಾಪುರ ತಾಲೂಕಿನ ಬೇಳೂರು ಗ್ರಾಮದಲ್ಲಿ ಗೋ ಮಾಂಸವನ್ನು ಆಟೋ ರಿಕ್ಷಾದಲ್ಲಿರಿಸಿಕೊಂಡು ಕುಂಭಾಶಿ ಕಡೆಗೆ ಬರುತ್ತಿರುವ ಬಗ್ಗೆ ನಿಖರ ಮಾಹಿತಿ ಪಡೆದ ಸಾರ್ವಜನಿಕರು ಹಾಗೂ ಬಿಜೆಪಿ ಗೋ ಸಂರಕ್ಷಣಾ ಪ್ರಕೋಷ್ಠದ ಸದಸ್ಯರು ಪತ್ತೆ ಹಚ್ಚಿ ಪೊಲೀಸ್‌ ವಶಕ್ಕೆ ನೀಡಿದ ಘಟನೆ ರವಿವಾರ ಸಂಭವಿಸಿದೆ.

Advertisement

ಬೇಳೂರಿನಿಂದ ಕುಂಭಾಶಿ ಕಡೆಗೆ ಬೆಳಗ್ಗೆ 8 ಗಂಟೆ ಸುಮಾರಿಗೆ  ಆಟೋ ರಿಕ್ಷಾದಲ್ಲಿ ನಾಲ್ವರು ಅನುಮಾನಾಸ್ಪದ ಸ್ಥಿತಿಯಲ್ಲಿ ಸಂಚರಿಸುತ್ತಿರುವ ಬಗ್ಗೆ ನಿಖರ ಮಾಹಿತಿ ಪಡೆದ ಸ್ಥಳೀಯರು ಉಳೂ¤ರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದಲ್ಲಿ   ತಡೆದು ನಿಲ್ಲಿಸಿ  ಕೋಟ ಪೊಲೀಸರ  ವಶಕ್ಕೆ ನೀಡಿದ್ದಾರೆ.

ಪ್ರಕರಣದಲ್ಲಿ ಭಾಗಿಯಾಗಿರುವ ಕುಂಭಾಶಿ ವಿನಾಯಕ ನಗರದ ನಿವಾಸಿ ಆಟೋ ಚಾಲಕ ಯೋಗೀಶ್‌ ದೇವಾಡಿಗ, ಪ್ರಮೋದ್‌, ಪ್ರಶಾಂತ್‌, ಲಕ್ಷ್ಮಣ್‌ ಕುಂಭಾಶಿ, ರಾಜಶ್ರೀ  ಎಂದು ಗುರುತಿಸಲಾಗಿದೆ. ದಂಧೆಗೆ ಬಳಸಿದ ಆಟೋ ಸಹಿತ ನಾಲ್ಕು ಪ್ಲಾಸ್ಟಿಕ್‌ ಬಕೆಟ್‌ಗಳಲ್ಲಿದ್ದ ಸುಮಾರು 70 ಕೆಜಿಗೂ ಅಧಿಕ ಗೋ ಮಾಂಸ ಹಾಗೂ ಗೋ ವಧೆಗೆ ಬಳಸಲಾದ ಪರಿಕರವನ್ನು  ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಗ್ರಾಮೀಣ ಪ್ರದೇಶದಿಂದ ಕಳವು
ಹಲವು ದಿನಗಳಿಂದ ಗ್ರಾಮೀಣ ಭಾಗಗಳಾದ ಕೆದೂರು ಹಾಗೂ ಬೇಳೂರಿನಲ್ಲಿ  ನಡೆಯುತ್ತಿದ್ದ ಗೋ ಕಳವು  ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಈ ದಂಧೆ ಪತ್ತೆಯಾಗಿರುವುದು ಸ್ಥಳೀಯರಲ್ಲಿ  ಆತಂಕಕ್ಕೆ ಕಾರಣವಾಗಿದೆ ಮುಗ್ಧ ಜನರನ್ನು ಇಂತಹ ಅಕ್ರಮ ದಂಧೆಯಲ್ಲಿ ಬಳಸಿಕೊಳ್ಳಲಾಗು ತ್ತಿರುವುದರ ಹಿಂದೆ  ಸ್ಥಳೀಯ ಪ್ರಭಾವಿಗಳ ಕೈವಾಡವಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅನುಮಾನ ವ್ಯಕ್ತವಾಗಿದೆ. 

ಈ ಹಿಂದೆಯೂ   ಗ್ರಾಮೀಣ   ಭಾಗದ ಗುಳ್ಳಾಡಿಯಲ್ಲಿ ತಡರಾತ್ರಿ ಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಗೋ ಸಾಗಾಟ ದಂಧೆಯಲ್ಲಿ ತೊಡಗಿರು ವವರ ವಿರುದ್ಧ ಸ್ಥಳೀಯ ಹಿಂದೂ ಪರ ಸಂಘಟನೆಗಳು ಧ್ವನಿ ಎತ್ತಿತ್ತು.

Advertisement

ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next