Advertisement

ಉಳ್ಳಾಲ: ಗೆಸ್ಟ್ ಹೌಸ್ ನಲ್ಲಿ ಕಂಠಪೂರ್ತಿ ಕುಡಿದು ಮನೆಗಳಿಗೆ ನುಗ್ಗಿ ಮಾರಾಮಾರಿ!

08:45 AM Jun 26, 2022 | Team Udayavani |

ಉಳ್ಳಾಲ: ಉಚ್ಚಿಲ ಬಟ್ಟಪ್ಪಾಡಿಯ ಖಾಸಗಿ ಗೆಸ್ಟ್ ಹೌಸ್ ನಲ್ಲಿ ಬೆಂಗಳೂರು ‌ಮೂಲದ ತಂಡಗಳ ನಡುವೆ ಹೊಡೆದಾಟ ನಡೆದಿದ್ದು, ಹೊಡೆದಾಟದ ಸಂದರ್ಭದಲ್ಲಿ ಸ್ಥಳೀಯ ಮನೆಗಳಿಗೆ ನುಗ್ಗಿ ತೊಂದರೆ ನೀಡಿದ್ದಾರೆ ಎಂದು ಸ್ಥಳೀಯರು ಅರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.

Advertisement

ಖಾಸಗಿ ಗೆಸ್ಟ್ ಹೌಸ್ ನಲ್ಲಿ ಪಾರ್ಟಿ ನಡೆಯುತ್ತಿದ್ದು ಎರಡು ಬಸ್ ಗಳಲ್ಲಿ ಜನರು ಆಗಮಿಸಿದ್ದರು. ತಡರಾತ್ರಿವರೆಗೆ ಪಾರ್ಟಿ ನಡೆಸಿದ ತಂಡದ ನಡುವೆ ಹೊಡೆದಾಟ ಆರಂಭವಾಗಿದ್ದು, ಬಳಿಕ ಹೊಡೆದಾಟ ಗೆಸ್ಟ್ ಹೌಸ್ ಹೊರಗಡೆ ರಸ್ತೆ ಬದಿಗೆ ಬಂದಿದೆ.

ಈ ಸಂದರ್ಭದಲ್ಲಿ ಹೊಡೆದಾಟ ನಡೆಸಿದ ಕುಡಿತದ ಅಮಲಿನಲ್ಲಿದ್ದ ತಂಡ ಸ್ಥಳೀಯ ಮನೆಯೊಂದಕ್ಕೆ ನುಗ್ಗಿ ದಾಂದಲೆ ನಡೆಸಿದ್ದಾರೆ ಎಂದು ಸ್ಥಳೀಯರು ಅಪಾದಿಸಿ ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ:ನೀವು ಚಿನ್ನ ಖರೀದಿಸಲು ಪ್ಲ್ರಾನ್‌ ಮಾಡುತ್ತಿದ್ದೀರಾ? ಚಿನ್ನ ಖರೀದಿಗೆ ಇದು ಸರಿಯಾದ ಸಮಯ

ಘಟನೆಯಲ್ಲಿ ಓರ್ವ ಗಾಯಗೊಂಡಿದ್ದು, ಪೊಲೀಸರು ಸ್ಥಳಕ್ಕೇ ಧಾವಿಸುತ್ತಿದ್ದಂತೆ ಪರಾರಿಯಾಗಿದ್ದಾರೆ. ಸ್ಥಳೀಯರು ಅರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next