ಉಳ್ಳಾಲ : ಹಣದ ವಿಚಾರಕ್ಕೆ ಸಂಬಂಧಿಸಿ ರೌಡಿಶೀಟರ್ ಓರ್ವನ ಹತ್ಯೆಗೆ ಯತ್ನಿಸಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಉಚ್ಚಿಲ ಮುಳ್ಳುಗುಡ್ಡೆ ಸಮೀಪ ಮೇ 24ರಂದು ಬೆಳಗ್ಗೆ ಸಂಭವಿಸಿದೆ.
ಉಚ್ಚಿಲ ನಿವಾಸಿ ಆರೀಫ್ (38) ಹತ್ಯೆ ಯತ್ನಕ್ಕೆ ಒಳಗಾದವರು.
ಮಂಗಳವಾರ ಮುಂಜಾನೆ ಮಂಗಳೂರಿನ ದಕ್ಕೆಗೆ ಕೆಲಸಕ್ಕೆಂದು ಬೈಕ್‌ನಲ್ಲಿ ತೆರಳುವಾಗ ಮುಳ್ಳುಗುಡ್ಡೆ ಸಮೀಪ ಕಾರೊಂದರಲ್ಲಿ ಅವಿತು ಕುಳಿತಿದ್ದ ನಾಲ್ವರ ತಂಡ ತಲವಾರಿನಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿದೆ.
ಘಟನೆಯ ವಿವರ
ಆರೀಫ್ ಸಹೋದರ ಕರೀಂ ಅವರು ನೌಫಾಲ್ ಮತ್ತು ತಂಡದಿಂದ 60,000 ರೂ. ಹೆಚ್ಚುವರಿ ಬಡ್ಡಿ ನೀಡುವುದಾಗಿ ಪಡೆದುಕೊಂಡಿದ್ದರು. ಸಮಯಕ್ಕೆ ಸರಿಯಾಗಿ ಹಣ ನೀಡದ ಹಿನ್ನೆಲೆ ನೌಫಾಲ್ ಮತ್ತು ತಂಡ ಕರೀಂ ಕೆಲಸ ನಡೆಸುವ ಮೀನುಗಾರಿಕೆಯ ಸಲಕರಣೆಗಳನ್ನು ಹೊತ್ತೂಯ್ದಿದ್ದರು. ಕರೀಂ ಅಸಲು ಹಣ ಪಾವತಿಸಿ ಸಾಮಗ್ರಿಗಳನ್ನು ವಾಪಸು ಪಡೆದುಕೊಂಡಿದ್ದರು. ಆದರೆ ಪಡೆದ ಸಾಲದ ಬಡ್ಡಿ ಹಣ 7,000 ರೂ. ನೀಡಿರಲಿಲ್ಲ. ಇದೇ ವಿಚಾರದಲ್ಲಿ ಆರೀಫ್ ಮತ್ತು ಕರೀಂ ಸಹೋದರರು ಹಾಗೂ ನೌಫಾಲ್ ತಂಡದ ನಡುವೆ ವಾಗ್ವಾದ ನಡೆದಿತ್ತು. ಇದೇ ದ್ವೇಷದ ಹಿನ್ನೆಲೆಯಲ್ಲಿ ನೌಫಾಲ್, ಸಾದಿಕ್ ಮತ್ತಿಬ್ಬರ ತಂಡ ಕೆಲಸಕ್ಕೆ ಹೋಗುತ್ತಿದ್ದ ಆರೀಫ್ ಮೇಲೆ ಕೊಲೆಗೆ ಯತ್ನಿಸಿರುವುದಾಗಿ ತಿಳಿದುಬಂದಿದೆ.
Related Articles
ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಏಷ್ಯಾ ಕಪ್ ಹಾಕಿ: ಜಪಾನ್ ವಿರುದ್ಧ ಭಾರತಕ್ಕೆ ಆಘಾತ