Advertisement

ಉಳ್ಳಾಲ: ಮರಳು ಕಳ್ಳರಿಂದ ಸಿಸಿ ಕೆಮರಾ ಧ್ವಂಸ‌

12:40 AM Sep 12, 2022 | Team Udayavani |

ಉಳ್ಳಾಲ: ಸೋಮೇಶ್ವರ ಸಮುದ್ರ ತೀರದಿಂದ ನಿರಂತರ ಮರಳು ಕಳ್ಳತನವಾಗುತ್ತಿರುವ ಹಿನ್ನೆಲೆಯಲ್ಲಿ ಹಾಕಿದ್ದ ಸಿಸಿ ಕೆಮರಾ ಮತ್ತು ತಂತಿ ತಡೆ ಬೇಲಿಯನ್ನೇ ಮರಳು ಕಳ್ಳರು ಧ್ವಂಸ ಮಾಡಿದ್ದಾರೆ.

Advertisement

ಮರಳು ಕಳ್ಳತನ ತಡೆಯಲು ಸೋಮೇಶ್ವರ ಸಮುದ್ರ ತೀರ, ಕೋಟೆಪುರ, ತಲಪಾಡಿ ಇನ್ನಿತರ ಪ್ರದೇಶಗಳಲ್ಲಿ ಜಿಲ್ಲಾಡಳಿತವು ಇಂಟರ್ನೆಟ್‌ ಆಧಾರಿತ ಸಿಸಿ ಕೆಮರಾಗಳನ್ನು ಅಳವಡಿಸಿದೆ.

ಸೆ. 10ರ ಮುಂಜಾನೆ ನಸುಕಿನ 1ರಿಂದ ಎರಡು ಗಂಟೆ ಸುಮಾರಿಗೆ ಸೋಮೇಶ್ವರ ದೇವಸ್ಥಾನದ ರಥಬೀದಿಯಲ್ಲಿ ಅಳವಡಿಸಲಾಗಿದ್ದ ಸಿಸಿಕೆಮರಾವನ್ನು ಟಿಪ್ಪರ್‌ ಒಂದು ಹಿಮ್ಮುಖವಾಗಿ ಚಲಿಸಿ ಧ್ವಂಸ ಮಾಡಿದೆ.

ಮರಳು ಕಳ್ಳರು ಸಿಸಿ ಕೆಮರಾವನ್ನು ಟಿಪ್ಪರ್‌ ಮುಖೇನ ಪುಡಿಗೈದ ವೀಡಿಯೋ ವೈಫೈ ಮುಖೇನ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next