Advertisement

ಉಳ್ಳಾಲ: ಬೈಕ್‌ಗೆ ಕಾರು ಢಿಕ್ಕಿ: ಡೆಲಿವರಿ ಬಾಯ್‌ ಸಾವು

01:18 AM Feb 11, 2023 | Team Udayavani |

ಉಳ್ಳಾಲ: ಬೈಕ್‌ಗೆ ಕಾರು ಢಿಕ್ಕಿ ಹೊಡೆದು ಸ್ಕೂಟರ್‌ ಸವಾರ ಹೊಟೇಲ್‌ ಉದ್ಯೋಗಿ ಹಾಗೂ ಝೊಮ್ಯಾಟೋ ಡೆಲಿವರಿ ಬಾಯ್‌ ಸಾವನ್ನಪ್ಪಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಮಂಜನಾಡಿ ಕಲ್ಕಟ್ಟದಲ್ಲಿ ಸಂಭವಿಸಿದೆ.

Advertisement

ಮೂಲತಃ ಕ್ಯಾಲಿಕಟ್‌ ನಿವಾಸಿ, ಕುತ್ತಾರು ಸಂತೋಷ ನಗರದ ಬಾಡಿಗೆ ಮನೆಯಲ್ಲಿ ಇದ್ದ ಅನಿಲ್‌ ಕುಮಾರ್‌ (41) ಮೃತರು. ಅವರು ಝೊಮ್ಯಾಟೋ ಸಂಸ್ಥೆಯಲ್ಲಿ ಡೆಲಿ ವರಿ ಬಾಯ್‌ ಹಾಗೂ ಸಂಜೆಯ ಅನಂತರ ದೇರಳಕಟ್ಟೆಯ ಜ್ಯೂಸ್‌ ಮ್ಯಾಜಿಕ್‌ ಹೊಟೇಲಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ರಾತ್ರಿ 11 ಗಂಟೆಯ ಸುಮಾರಿಗೆ ಮಂಜನಾಡಿಯ ಕಲ್ಕಟ್ಟದಿಂದ ಫುಡ್‌ ಡೆಲಿವರಿ ಆರ್ಡರ್‌ ಹಿಡಿದುಕೊಂಡು ತೆರಳುವ ಸಂದರ್ಭ ಕೇರಳ ನೋಂದಾಯಿತ ಅಬೂಬಕರ್‌ ಸಿದ್ದೀಕ್‌ ಅವರು ಚಲಾಯಿಸುತ್ತಿದ್ದ ಕಾರು ಅನಿಲ್‌ ಇದ್ದ ಸ್ಕೂಟರಿಗೆ ಢಿಕ್ಕಿ ಹೊಡೆದಿದೆ.

ಪರಿಣಾಮ ಅನಿಲ್‌ ಅವರು ಪಕ್ಕದ ಮನೆಯ ಕಾಂಪೌಂಡಿಗೆ ಎಸೆಯಲ್ಪಟ್ಟು, ಬಳಿಕ ರಸ್ತೆಗೆ ಉರುಳಿ ಬಿದ್ದು ತಲೆಗೆ ಗಂಭೀರ ಪೆಟ್ಟಾಗಿತ್ತು. ತತ್‌ಕ್ಷಣ ಅಪಘಾತ ನಡೆದ ಕಾರಿನಲ್ಲೇ ಗಾಯಾಳುವನ್ನು ದೇರಳಕಟ್ಟೆಯ ಯೇನಪೊಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ ದೇರಳಕಟ್ಟೆ ಜ್ಯೂಸ್‌ ಮ್ಯಾಜಿಕ್‌ ಹೊಟೇಲ್‌ ಮಾಲಕರಾದ ಶಾಜಿದ್‌ ಜಿ.ಎಂ. ಮತ್ತು ಹಸನ್‌ ಅವರು ಹೆಚ್ಚಿನ ಚಿಕಿತ್ಸೆಗಾಗಿ ದೇರಳಕಟ್ಟೆಯ ಕ್ಷೇಮ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಡೆಲಿವರಿ ಪಾರ್ಟಿಗೆ ಕರೆ ಮಾಡಿ ಬರುವೆನೆಂದು ತಿಳಿಸಿದ್ದರು
ದೇರಳಕಟ್ಟೆಯ ಜ್ಯೂಸ್‌ ಮ್ಯಾಜಿಕ್‌ ಹೊಟೇಲಿನಿಂದ ಡೆಲಿವರಿ ಕೊಂಡೊಯ್ದು, ಕಲ್ಕಟ್ಟದ ಆರ್ಡರ್‌ ಮಾಡಿದ ಮಂದಿಗೆ ಅನಿಲ್‌ ಅವರು ಕರೆ ಮಾಡಿದ್ದರು. ಅಲ್ಲದೆ ಮನೆಯ ಸಮೀಪವೇ ಇದ್ದು ಹೊರಬರುವಂತೆ ತಿಳಿಸಿದ್ದರು. ಅಷ್ಟರಲ್ಲೇ ಅಪಘಾತ ನಡೆದಿತ್ತು. ಆರ್ಡರ್‌ ಮಾಡಿರುವ ಪಾರ್ಟಿಯವರಿಗೆ ಅಪಘಾತದ ಸದ್ದು ಕೇಳಿದ್ದು, ವಾಪಸು ಅನಿಲ್‌ ಅವರಿಗೆ ಕರೆ ಮಾಡಿದಾಗ ಮೊಬೈಲ್‌ ಸ್ವೀಕರಿಸುತ್ತಿರಲಿಲ್ಲ. ಇದರಿಂದ ಹೊಟೇಲ್‌ ಮಾಲಕರಿಗೆ ಅಪಘಾತ ನಡೆದಿರುವ ವಿಚಾರವನ್ನು ಫುಡ್‌ ಆರ್ಡರ್‌ ಮಾಡಿರುವ ಪಾರ್ಟಿ ಯವರೇ ಕರೆ ಮಾಡಿ ತಿಳಿಸಿದ್ದರು.

ಹೊಟೇಲ್‌ ಬಂದ್‌ ಮಾಡಿ ಗೌರವ ಸಲ್ಲಿಕೆ
ಮೃತರ ಅಂತಿಮ ಕ್ರಿಯೆ ಊರಿನಲ್ಲೇ ನಡೆಸುವ ಹಿನ್ನೆಲೆಯಲ್ಲಿ ಝೊಮ್ಯಾಟೋ ಡೆಲಿವರಿ ಹುಡುಗರು ಹಾಗೂ ಹೊಟೇಲ್‌ ಮಾಲಕರು ಆ್ಯಂಬ್ಯುಲೆನ್ಸ್‌ ವ್ಯವಸ್ಥೆ ಕಲ್ಪಿಸಿದರು.

Advertisement

ಸಾವಿಗೆ ಕಂಬನಿ ಮಿಡಿದ ಸಹೋದ್ಯೋಗಿಗಳು ಹಾಗೂ ಮಾಲಕರು ದೇರಳಕಟ್ಟೆ ಕೆ.ಎಸ್‌. ಹೆಗ್ಡೆ ಆಸ್ಪತ್ರೆ ಎದುರುಗಡೆ ಇರುವ ಜ್ಯೂಸ್‌ ಮ್ಯಾಜಿಕ್‌, ಐಸ್‌ ಮ್ಯಾಜಿಕ್‌ ಮತ್ತು ಬರ್ಗರ್‌ ಪಾಯಿಂಟ್‌ ಎನ್ನುವ ಹೆಸರಿನ ಮೂರೂ ಹೊಟೇಲ್‌ಗ‌ಳನ್ನು ಶುಕ್ರವಾರ ಬಂದ್‌ ಮಾಡಿ ಮೃತ ಅನಿಲ್‌ ಅವರಿಗೆ ಗೌರವ ಸಲ್ಲಿಸಿದ್ದಾರೆ.
ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರಿ ಹೋಯಿತು ಮದುವೆಯ ಖುಷಿ
ಮೃತ ಅನಿಲ್‌ ಅವರ ತಾಯಿ ಕೆಲವು ತಿಂಗಳುಗಳ ಹಿಂದೆಯಷ್ಟೇ ಮೃತಪಟ್ಟಿದ್ದರು. ಒಂಟಿಯಾಗಿದ್ದ ಅನಿಲ್‌ ಅವರಿಗೆ ವಿವಾಹವಾಗಲು ಹೊಟೇಲ್‌ ಮಾಲಕ ಸಾಜಿದ್‌ ಅವರು ಹುಡುಗಿಯನ್ನು ಹುಡುಕಿದ್ದರು. ಇದೇ ಖುಷಿಯಲ್ಲಿ ಫೆ. 8ರಂದು ಕ್ಯಾಲಿಕಟ್‌ನ ದೇವಸ್ಥಾನಗಳಿಗೆ ತೆರಳಿದ್ದ ಅನಿಲ್‌ ಕುಮಾರ್‌ ಗುರುವಾರ ಸಂಜೆಯಷ್ಟೇ ಹೊಟೇಲಿಗೆ ವಾಪಸಾಗಿ ಕರ್ತವ್ಯಕ್ಕೆ ಹಾಜರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next