Advertisement

ಸಾಮೂಹಿಕ ವಿವಾಹ ಸರಳ ಜೀವನಕ್ಕೆ ಪ್ರೇರಣೆ: ದುಗ್ಗಣ್ಣ ಸಾವಂತ

10:01 AM May 24, 2018 | |

ಉಳೆಪಾಡಿ: ಸಮಾನತೆ ಮತ್ತು ಸಾಮರಸ್ಯ ಸಾಧಿಸಲು ಸರಳವಾಗಿ ನಡೆಯುವ ಸಾಮೂಹಿಕ ವಿವಾಹದಿಂದ ಸಾಧ್ಯ. ಸಾಮೂಹಿಕ ವಿವಾಹ ಸರಳ ಜೀವನಕ್ಕೆ ಪ್ರೇರಣೆಯಾಗಿದೆ ಎಂದು ಮೂಲ್ಕಿ ಸೀಮೆಯ ಅರಸರಾದ ಕೆ. ದುಗ್ಗಣ್ಣ ಸಾವಂತರು ಹೇಳಿದರು.

Advertisement

ಮೇ 23ರಂದು ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಾಮ್ಮಾಯಿ ದೇವಸ್ಥಾನದಲ್ಲಿ ನಡೆದ ಎಂಟನೇ ವರ್ಷದ ಪ್ರತಿಷ್ಠಾ ವರ್ಧಂತಿ ಹಾಗೂ ಉಚಿತ ಸಾಮೂಹಿಕ ವಿವಾಹ- 2018 ಸಮಾರಂಭದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಟೀಲು ದೇವಸ್ಥಾನದ ಪ್ರಧಾನ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಶುಭಾಶಂಸನೆಗೈದರು.

ಪ್ರತಿಭಾ ಪುರಸ್ಕಾರ
ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ಚತುರ್ಥ ಸ್ಥಾನ ಹಾಗೂ ಮೂಡಬಿದಿರೆ ಆಳ್ವಾಸ್‌ ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಮೆಲಿಷಾ ರೋಡ್ರಿಗಸ್‌ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಪಾವಂಜೆ ಜ್ಞಾನಶಕ್ತಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಧರ್ಮದರ್ಶಿಯಾಜಿ ನಿರಂಜನ ಭಟ್‌, ಬೆಂಗಳೂರು ಬಸವನ ಗುಡಿ ಕರ್ನಾಟಕ ಬ್ಯಾಂಕ್‌ ಪ್ರಧಾನ ಪ್ರಬಂಧಕ ಸಿ.ಎಸ್‌. ಸತೀಶ್‌, ಕರ್ನಾಟಕ ಅಸೋಸಿಯೇಶನ್‌ ರಾಜ್ಯಾಧ್ಯಕ್ಷ ರಾಜಗೋಪಾಲ ರೈ, ಸುರತ್ಕಲ್‌ ಮಹಾಮ್ಮಾಯಿ ದೇವಸ್ಥಾನದ ಕೆ. ಅರುಣ್‌ ಪೈ, ದುರ್ಗಾ ಪರಮೇಶ್ವರೀ ಮಹಾಮ್ಮಾಯಿ ದೇವಸ್ಥಾನದ ಗೌರವಾಧ್ಯಕ್ಷರಾದ ವಿರಾರ್‌ ಶಂಕರಶೆಟ್ಟಿ ಬಳ್ಕುಂಜೆ, ಸಾಮೂಹಿಕ ವಿವಾಹದ ಸಂಚಾಲಕ ಬಳ್ಕುಂಜೆಗುತ್ತು ಡಾ| ಕೃಷ್ಣ ಕುಮಾರ್‌ ಶೆಟ್ಟಿ ಮುಂಬಯಿ, ಅಧ್ಯಕ್ಷ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಕಾರ್ಯಾಧ್ಯಕ್ಷರಾದ ನಾರಾಯಣ ಶೆಟ್ಟಿ ಉಳೆಪಾಡಿ, ಸುಧಾಕರ್‌ ಕಿನ್ನಿಗೋಳಿ, ಪದ್ಮಿನಿ ವಸಂತ್‌, ಮಮತಾ ಪೂಂಜಾ, ಶ್ರೀಮತಿ ಮೋಹನ್‌ದಾಸ್‌ ಮತ್ತಿತರರು ಉಪಸ್ಥಿತರಿದ್ದರು.

ದೇವಸ್ಥಾನದ ಧರ್ಮದರ್ಶಿ ಮೋಹನ ದಾಸ್‌ ಸುರತ್ಕಲ್‌ ಪ್ರಸ್ತಾವನೆಗೈದು, ಸ್ವಾಗತಿಸಿದರು. ಪ್ರಮೀಳಾ ವಿನಯ್‌ ಸುರಗಿರಿ ಸಮ್ಮಾನಿತರನ್ನು ಪರಿಚಯಿಸಿದರು. ಎಂ.ಎಸ್‌. ಕೃಷ್ಣ ಮೋಹನ್‌ ಮಂಗಳೂರು ವಂದಿಸಿದರು. 

Advertisement

ದಾಂಪತ್ಯಕೆ ಕಾಲಿಟ್ಟ ಆರು ಜೋಡಿ
ರಾಘವೇಂದ್ರ ನಾಯ್ಕ- ಸಂಗೀತಾ, ಶೇಖರ- ಸುಗಂಧಿ, ಶಂಕರ- ತಾರಾ, ಸಂಪತ್‌ ಕುಮಾರ್‌- ಕೀರ್ತಿ, ಜಗದೀಶ- ಪ್ರಭಾವತಿ, ಗಿರೀಶ-ಚಂದ್ರಕಲಾ ಒಟ್ಟು ಆರು ಜೋಡಿಗಳು ಈ ಸಂದರ್ಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next