ಮಂಗಳೂರು: ಇತ್ತೀಚೆಗೆ ಗುರುಗಾಂವ್‌ನದಲ್ಲಿ ನಡೆದ ಗ್ರೇಟ್ ಇಂಡಿಯನ್ ಐಸ್ ಕ್ರೀಂ ಸ್ಪರ್ಧೆಯಲ್ಲಿ ಪಾಣೆಮಂಗಳೂರಿನ ಪ್ರಸಿದ್ಧ ಉಲ್ಲಾಸ್ ಐಸ್ ಕ್ರೀಂಗೆ ನಾಲ್ಕು ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ. ಸಂಸ್ಥೆಯ ಸಲಹೆಗಾರ ಪುರುಷೋತ್ತಮ್ ಪೈ ಅವರು ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಗುರುಗಾಂವ್‌ನಲ್ಲಿ ಡು ಪಾಂಟ್ ಮತ್ತು ಇಂಡಿಯನ್ ಡೇರಿ ಅಸೋಸಿಯೇಶನ್ಸ್ ನೇತೃತ್ವದಲ್ಲಿ ನಡೆದ ಸ್ಪರ್ಧೆಯಲ್ಲಿ ಕೂಲ್ ಕಿಡ್ಸ್ ವಿಭಾಗದಲ್ಲಿ ಮತ್ತು ಫೊಜನ್ ಡೆಸರ್ಟ್ ವಿಭಾಗದಲ್ಲಿ ಚಿನ್ನದ ಪದಕ, ಸ್ಟಾಂಡರ್ಡ್ ವೆನಿಲ್ಲಾ ಫೊಜನ್ ಡೆಸರ್ಟ್ ವಿಭಾಗದಲ್ಲಿ ಬೆಳ್ಳಿ ಪದಕ ಹಾಗೂ ಸ್ಟಾಂಡರ್ಡ್ ವೆನಿಲ್ಲಾ ಐಸ್ ಕ್ರೀಂ ವಿಭಾಗದಲ್ಲಿ ಬೆಳ್ಳಿ ಪದಕ ಗಳಿಸಿದೆ.
2016ರಲ್ಲೂ ಸಂಸ್ಥೆಯ ನಿರ್ಮಿತಿ ಸ್ಟಾಡರ್ಡ್ ವೆನಿಲ್ಲಾ ಐಸ್ ಕ್ರೀಂ ಕೂಡ ಚಿನ್ನದ ಪದಕ ಲಭಿಸಿತ್ತು ಎಂದು ಅವರು ತಿಳಿಸಿದರು. 103 ಸಂಸ್ಥೆಗಳು ಭಾಗವಹಿಸಿದ ಈ ಸ್ಪರ್ಧೆಯಲ್ಲಿ 4 ಪ್ರಶಸ್ತಿಗಳು ಉಲ್ಲಾಸ್ ಐಸ್‌ಕ್ರೀಂ ಸಂಸ್ಥೆಗೆ ಲಭಿಸಿವೆ.
ಕಳೆದ 26 ವರ್ಷಗಳಿಂದ ಐಸ್ ಕ್ರೀಂ ಉತ್ಪಾದನೆಯಲ್ಲಿ ಹೆಸರುವಾಸಿಯಾಗಿರುವ ಸಂಸ್ಥೆ ಕೂಲ್ ಕಿಡ್ಸ್ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿರುವುದು ನಮಗೆ ಬಹಳ ಹೆಮ್ಮೆಯ ವಿಷಯ ಎಂದು ಹೇಳಿದರು.
ಕಟ್ಟಾ ಮೀಟಾ (ಹುಣಸೆ ಹಣ್ಣು ರುಚಿ), ಪೈನಾಪಲ್ ಫುಡ್ಡಿಂಗ್, ಮ್ಯಾಂಗೋ ಅಲ್ಫಾನ್ಸೋ ಹಾಗೂ ಮ್ಯಾಂಗೋ ಮೂಡ್, ಆರೆಂಜ್ ಮೂಡ್, ಗ್ರೇಪ್ ಮೂಡ್‌ನ ಮೂರು ಕ್ಯಾಂಡಿಗಳನ್ನು ಹೊಸದಾಗಿ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಸಂಸ್ಥೆಯ ಮಾಲಕ ಬಿ.ಎಚ್. ಉದಯ ಪೈ, ಉತ್ಪನ್ನಗಳ ಮಾರಾಟದ ಪ್ರಧಾನ ವ್ಯವಸ್ಥಾಪಕರಾದ ಹಕೀಂ ಉಲ್ಲಾಸ್,
ಸಂತು ಗ್ರಾಫಿಕ್ಸ್, ಪುರುಷೋತ್ತಮ ಪ್ರಭು ಉಪಸ್ಥಿತರಿದ್ದರು.