ಲಂಡನ್: ಯುನೈಟೆಡ್ ಕಿಂಗ್‌ಡಮ್ ರಾಷ್ಟ್ರ ವನ್ನು ಪ್ರವೇಶಿಸುವ ಭಾರತೀಯರಿಗೆ ಕಡ್ಡಾಯವಾಗಿ 10 ದಿನಗಳ ಕ್ವಾರಂಟೈನ್‌ಗೆ ಒಳಪಡಿಸುವುದಾಗಿ ಆ ದೇಶ ಘೋಷಿಸಿದೆ. ಎರಡು ಡೋಸ್ ಕೊರೊನಾ ಲಸಿಕೆ ಪಡೆದಿರು ವವರಿಗೂ ಇದು ಅನ್ವಯವೆಂದು ಹೇಳಿದೆ.
ಸೋಮವಾರ, ವಿದೇಶಿ ಪ್ರಯಾಣಿಕರಿಗಾಗಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದ್ದು ಅದರಲ್ಲಿ ಈ ಅಂಶಉಲ್ಲೇಖೀ ಸಲಾಗಿದೆ. ಈ ನಿಯಮಗಳು ಅ. 4ರಿಂದ ಜಾರಿಯಾಗಲಿವೆ. ಭಾರತ, ಆಫ್ರಿಕಾ, ದಕ್ಷಿಣ ಅಮೆರಿಕ, ಯುಎಇ, ಟರ್ಕಿ, ಜೋರ್ಡನ್, ಥಾಯ್ಲೆಂಡ್, ರಷ್ಯಾದಲ್ಲಿ ಲಸಿಕೆ ಪಡೆದವ ರನ್ನು ಲಸಿಕೆ “ಪಡೆಯದೇ ಇರುವವರು’ ಎಂದು ಪರಿಗಣಿಸಲಾಗುತ್ತದೆ ಎಂದಿದೆ.
ತರೂರ್ ಪ್ರವಾಸ ರದ್ದು: ಯು.ಕೆ. ನಿಯಮ ಟೀಕಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, “ಇದೊಂದು ಅಪರಾಧ’ ಎಂದಿದ್ದಾರೆ. ಜತೆಗೆ ಪ್ರತಿಭಟನಾರ್ಥವಾಗಿ ತಮ್ಮ ಯು.ಕೆ. ಪ್ರವಾಸವನ್ನೂ ಅವರು ರದ್ದು ಮಾಡಿದ್ದಾರೆ. ಕ್ಯಾಂಬ್ರಿಡ್ಜ್ ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅವರು ಯುಕೆಗೆ ತೆರಳಬೇಕಾಗಿತ್ತು. ಮಾಜಿ ಕೇಂದ್ರ ಸಚಿವ ಜೈರಾಂ ರಮೇಶ್ ಟ್ವೀಟ್ ಮಾಡಿ “ಭಾರತದಲ್ಲಿ ನೀಡಲಾಗುತ್ತಿರುವ ಕೊವಿ ಶೀಲ್ಡ್ ಲಸಿಕೆಯು ಯು.ಕೆ. ಮೂಲದ್ದು. ಅದನ್ನು ಪಡೆದವರಿಗೂ ಕ್ವಾರಂಟೈನ್ ಹೇರುವುದಾದರೆ ಅದು ಜನಾಂಗೀಯ ತಾರತಮ್ಯ’ ಎಂದಿದ್ದಾರೆ.
ವೈರಾಣುಗಳು ಹಿಂದಿಗಿಂತಲೂ ಬಲಿಷ್ಠ :
ಕೊರೊನಾ ವೈರಾಣುವಿನ ಹೊಸ ತಳಿಗಳು ನಿಧಾನವಾಗಿ ಬಲಿಷ್ಠಗೊಳ್ಳತೊಡಗಿದ್ದು, ಗಾಳಿಯಲ್ಲಿ ಅತಿ ವೇಗವಾಗಿ ಹರಡಿ ಕೊಳ್ಳುವ ಸಾಮರ್ಥ್ಯ ಗಳಿಸಿವೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಅಮೆರಿಕದ ಮೇರಿಲ್ಯಾಂಡ್ ವಿಶ್ವ ವಿದ್ಯಾಲಯದ ತಜ್ಞರು ಈ ಅಧ್ಯಯನ ನಡೆಸಿದ್ದಾರೆ. ಸಾರ್ವಜ ನಿಕರು, 2 ಡೋಸ್ ಲಸಿಕೆ ಪಡೆದಿದ್ದರೂ, ಮೂಗಿನ ಮೇಲೆ ಬಿಗಿಯಾಗಿ ಕುಳಿತುಕೊಳ್ಳುವಂಥ ಮಾಸ್ಕ್ ಗಳನ್ನು ಧರಿಸಬೇಕು. ಹೆಚ್ಚು ಗಾಳಿ ಸಂಚಾರವಿರುವ ಸ್ಥಳಗಳಲ್ಲೇ ವ್ಯವಹರಿಸ ಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ. ಸಾಮಾನ್ಯವಾಗಿ ಕೊರೊನಾ ರೋಗಿಗಳು ಉಸಿರಾಡುವಾಗ ಅವರಿಂದ ವೈರಾಣುಗಳು ವಾತಾವರಣ ದಲ್ಲಿ ಹರಡಿಕೊಳ್ಳುತ್ತವೆ. ಆದರೆ ಕೊರೊನಾದ ಇತ್ತೀಚಿನ ತಳಿಯಾದ ಆಲ್ಫಾ, ಹಳೆಯ ಕೊರೊನಾ ವೈರಾಣು ವಿಗಿಂತ 48ರಿಂದ 100 ಪಟ್ಟು ಹೆಚ್ಚು ವೇಗವಾಗಿ ಹರಡುತ್ತವೆ ಎಂದು ಅವರು ಎಚ್ಚರಿಸಿದ್ದಾರೆ.