ಉಕ್ರೇನ್ ಮಹಿಳೆಯೊಬ್ಬರು ರಷ್ಯಾ ಸೈನಿಕರೊಂದಿಗೆ ವಾಗ್ವಾದ ನಡೆಸಿ ಶಹಬ್ಟಾಷ್‌ಗಿರಿ ಪಡೆದಿದ್ದಾರೆ. ರಷ್ಯಾ ಸೈನಿಕರು ಉಕ್ರೇನಿನ ಬಂದರು ನಗರಿ ಹೆನಿಚೆಸ್ಕ್ ನಲ್ಲಿ ಶಸ್ತ್ರಾಸ್ತ್ರ ಹಿಡಿದುಕೊಂಡು ನಿಂತಿದ್ದರು. ಅದನ್ನು ನೋಡಿದ ಉಕ್ರೇನಿ ಮಹಿಳೆ , “ಇಲ್ಲಿ ನೀವೇನು ಮಾಡುತ್ತಿದ್ದೀರಿ? ನನ್ನ ದೇಶದಲ್ಲಿ ನಿಮಗೇನು ಕೆಲಸ? ಎಂದು ಕೆರಳಿ ನುಡಿದಿದ್ದಾರೆ.
ಅದಕ್ಕೆ ಶಾಂತವಾಗಿಯೇ ಉತ್ತರಿಸಿದ ರಷ್ಯಾ ಸೈನಿಕರು, ನಮ್ಮ ಈ ಚರ್ಚೆಯಿಂದ ಯಾವ ಪ್ರಯೋಜನವೂ ಇಲ್ಲ ಎಂದಿದ್ದಾರೆ!
ಆಗ ಮತ್ತಷ್ಟು ಕೆರಳಿದ ಮಹಿಳೆ, ನೀವು ಆಕ್ರಮಣಕಾರರು, ಫ್ಯಾಸಿಸ್ಟರು, ಈ ಗನ್‌ಗಳನ್ನಿಟ್ಟುಕೊಂಡು ನೀವು ಮಾಡುತ್ತಿರುವ ಘನಂದಾರಿ ಕೆಲಸವಾದರೂ ಏನು? ಈ ಬೀಜಗಳನ್ನು ನಿಮ್ಮ ಜೇಬಿನಲ್ಲಿಟ್ಟುಕೊಳ್ಳಿ, ನೀವು ಸತ್ತು ಮಲಗಿದ ಮೇಲೆ ಕನಿಷ್ಠ ಪಕ್ಷ ಸೂರ್ಯಕಾಂತಿ ಸಸ್ಯವಾದರೂ ಬೆಳೆಯಲಿ…. ಎಂದು ಗುಡುಗಿದ್ದಾರೆ.
ಈಕೆಯ ಮಾತಿಗೆ ಟ್ವೀಟರ್ ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ಭಾರೀ ಮೆಚ್ಚುಗೆ ಬಂದಿದೆ.