ಉಕ್ರೇನ್ ವಿರುದ್ಧ ರಷ್ಯಾ ದಾಳಿ ನಡೆಸಲು ಆರಂಭವಾಗಿ ಒಂದು ವರ್ಷ ಸಮೀಪಿಸುತ್ತಿದೆ. ಕೆಲವೊಮ್ಮೆ ಉಕ್ರೇನ್, ಇನ್ನೊಮ್ಮೆ ರಷ್ಯಾದ ಪಡೆಗಳು ಮೇಲುಗೈ ಸಾಧಿಸಿದ ಬಗ್ಗೆ ವರದಿಗಳು ಪ್ರಕಟವಾಗುತ್ತವೆ. ಲಕ್ಷಾಂತರ ಮಂದಿ ಅಸುನೀಗಿದ್ದಾರೆ. ಈ ಬಗ್ಗೆ ಖಚಿತ ವರ್ತಮಾನವಂತೂ ಇಲ್ಲ. ಇತ್ತೀಚಿನ ಬೆಳವಣಿಗೆ ಏನೆಂದರೆ ಖೇರ್ಸಾನ್ ಪ್ರಾಂತದಲ್ಲಿ ರಷ್ಯಾ ವಿರುದ್ಧ ಉಕ್ರೇನ್ ಪಡೆ ಮೇಲುಗೈ ಸಾಧಿಸಿದೆ. ಅದರತ್ತ ಒಂದು ನೋಟ ಇಲ್ಲಿದೆ…
ಖೇರ್ಸಾನ್‌ನ ಪ್ರಾಮುಖ್ಯ ಏನು?
ಉಕ್ರೇನ್‌ನ ದಕ್ಷಿಣ ಭಾಗದಲ್ಲಿ ಇರುವ ಪ್ರಮುಖ ನಗರವೇ ಖೇರ್ಸಾನ್. ಯುದ್ಧ ಆರಂಭವಾಗುವ ಮುನ್ನ 3,80,000 ಮಂದಿ ಅಲ್ಲಿ ವಾಸಿಸುತ್ತಿದ್ದರು. ರಷ್ಯಾ ಸೇನೆ ವಶಪಡಿಸಿಕೊಂಡಿರುವ ಕ್ರಿಮಿಯಾ ಎಂಬ ಪ್ಯಾಂತವನ್ನು ಪ್ರವೇಶಿಸಲು ಇದು ಅತ್ಯಂತ ಪ್ರಮುಖವಾದ ಪ್ರದೇಶವಾಗಿದೆ. ಕ್ರಿಮಿಯಾದಲ್ಲಿ ರಷ್ಯಾ ಪ್ರಮುಖ ಸೇನಾ ನೆಲೆಗಳನ್ನು ಹೊಂದಿದೆ. ಡಿನಿಪ್ರೋ ನದಿ ಖೇರ್ಸಾನ್ ಪ್ರದೇಶವನ್ನು ಭಾಗ ಮಾಡಿಕೊಂಡು ಹರಿಯುತ್ತಿದೆ. ಹೀಗಾಗಿ ರಷ್ಯಾ ವಿರುದ್ಧ ಮೇಲುಗೈ ಸಾಧಿಸಲು ಉಕ್ರೇನ್‌ಗೆ ಇದು ನೆರವಾಗಿದೆ. ವೊಲೊಡಿಮಿರ್ ಝೆಲೆನ್‌ಸ್ಕಿ ಅವರಿಗೆ ಈ ಪ್ರದೇಶದಲ್ಲಿ ಜಯ ಗಳಿಸಿದರೆ ರಷ್ಯಾ ಪಡೆಗಳ ವಿರುದ್ಧದ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ನೈತಿಕ ಧೈರ್ಯ ಬರುತ್ತದೆ. ಇದಲ್ಲದೆ ಪಾಶ್ಚಾತ್ಯ ಭಾಗದ ಕೆಲವು ರಾಷ್ಟ್ರಗಳು ಉಕ್ರೇನ್‌ನ ಈ ಭಾಗವನ್ನು ರಷ್ಯಾಕ್ಕೆ ಬಿಟ್ಟುಕೊಟ್ಟು ಸಂಧಾನಕ್ಕೆ ಬರುವಂತೆ ಕೂಡ ಸಲಹೆ ಮಾಡಿವೆ.
ಈಗಿನ ಸ್ಥಿತಿ ಏನು?
ಶುಕ್ರವಾರದ ಮಧ್ಯಾಹ್ನದ ವರೆಗಿನ ಪರಿಸ್ಥಿತಿಯ ಪ್ರಕಾರ ಉಕ್ರೇನ್ ಸೇನೆ ಖೇರ್ಸಾನ್‌ನ ಪ್ರಮುಖ ಪ್ರದೇಶದತ್ತ ಪ್ರವೇಶ ಮಾಡುವಷ್ಟು ಶಕ್ತಿಯನ್ನು ಗಳಿಸಿಕೊಂಡಿವೆ. ಸಾಮಾಜಿಕ ಜಾಲ ತಾಣಗಳಲ್ಲಿ ಅಪ್‌ಲೋಡ್ ಆಗಿರುವ ಮಾಹಿತಿ ಮತ್ತು ಫೋಟೋಗಳ ಪ್ರಕಾರ ಝೆಲೆನ್‌ಸ್ಕಿ ಅವರ ಪಡೆಗಳು ಸ್ಥಳವನ್ನು ಮರು ವಶ ಮಾಡಿಕೊಂಡಿವೆ.
ಸೇನೆ ವಾಪಸಾತಿ ಪೂರ್ಣ
ಈ ಎಲ್ಲ ಬೆಳವಣಿಗೆಗಳಿಗೆ ಪೂರಕವಾಗಿ ರಷ್ಯಾದಲ್ಲಿ ರಕ್ಷಣ ಸಚಿವಾಲಯ ಹೇಳಿಕೊಂಡಿರುವಂತೆ ಖೇರ್ಸಾನ್‌ನಿಂದ ಪಡೆಗಳ ವಾಪ ಸಾತಿ ಕೂಡ ಪೂರ್ಣಗೊಂಡಿದೆ. ಉಕ್ರೇನ್‌ಗೆ ಹೊಂದಿಕೊಂಡಂತೆ ಇರುವ ಡಿನಿಪ್ರೋ ನದಿಯ ಪಶ್ಚಿಮ ದಂಡೆಯಿಂದ ಸೈನಿಕರನ್ನು ವಾಪಸ್ ಕರೆಯಿಸಿಕೊಳ್ಳಲಾಗಿದೆ.
Related Articles
12 ಇಷ್ಟು ಗ್ರಾಮಗಳು, ಪಟ್ಟಣಗಳು ಖೇರ್ಸಾನ್ ಭಾಗದಲ್ಲಿ ಇವೆ. ಅವು ಈಗ ಉಕ್ರೇನ್‌ನ ವಶ ಆಗಿವೆ.