ಬಂಟ್ವಾಳ: ಮಗುವಿನ ಅನಾರೋಗ್ಯದ ಹಿನ್ನೆಲೆಯಲ್ಲಿ ಕೊರಗಜ್ಜನಿಗೆ ಹೇಳಿದ್ದ ಹರಕೆಯಂತೆ ಉಕ್ರೇನ್‌ನ ಕುಟುಂಬವೊಂದು ನ. 11ರಂದು ರಾತ್ರಿ ಬಂಟ್ವಾಳದ ಕೊಡ್ಮಾಣ್ ನಲ್ಲಿ ಕೊರಗಜ್ಜನ ಸನ್ನಿಧಿ ಯಲ್ಲಿ ಅಗೇಲು ಸೇವೆ ನೀಡುವ ಮೂಲಕ ಗಮನ ಸೆಳೆದಿದೆ.
ಕೆಲವು ತಿಂಗಳ ಹಿಂದೆ ಭಾರತ ಪ್ರವಾಸ ಕೈಗೊಂಡಿದ್ದ ಉಕ್ರೇನ್‌ನ ಆ್ಯಂಡ್ರೋ, ಪತ್ನಿ ಎಲೆನಾ ಹಾಗೂ ಮಗ ಮ್ಯಾಕ್ಸಿಂ ಉಡುಪಿಯ ವಿವಿಧ ಪ್ರವಾಸಿ ತಾಣಗಳಿಗೆ ತೆರಳಿ ಬಳಿಕ ಅಲ್ಲಿನ ಗೋಶಾಲೆಗೆ ಭೇಟಿ ನೀಡಿದ್ದರು. ಈ ವೇಳೆ ನಾಡಿ ನೋಡಿ ಔಷಧ ಕೊಡುವ ಭಕ್ತಿಭೂಷಣ್ ಪ್ರಭುಜಿ ಅವರನ್ನು ಭೇಟಿಯಾಗಿ ತಮ್ಮ ಮಗನ ಅನಾರೋಗ್ಯದ ಕುರಿತು ವಿವರಿಸಿದ್ದರು.
ಗುರೂಜಿಯವರ ಮಾರ್ಗ ದರ್ಶನದಂತೆ ಬಂಟ್ವಾಳ ಕೊಡಾ¾ಣ್ ಸಮೀಪದ ಗೋವಿನತೋಟದ ಶ್ರೀ ರಾಧಾ ಸುರಭೀ ಗೋಮಂದಿರದಲ್ಲಿ ವಾಸ್ತವ್ಯವಿದ್ದು, ದೇಸಿ ದನದ ಜತೆಗೆ ವಿಹಾರ ಸಹಿತ ನಾಟಿ ಚಿಕಿತ್ಸೆ ಆರಂಭಿಸಿದ್ದರು. ಈ ವೇಳೆ ನಡೆದ ಕೊರಗಜ್ಜನ ಕೋಲದಲ್ಲಿ ಅನಾ ರೋಗ್ಯಕ್ಕೆ ಪರಿಹಾರ ನೀಡು ವಂತೆ ಕೋರಿದ್ದರು. ಮಗ ಗುಣಮುಖ ನಾಗಿರುವ ಕಾರಣ ಕೊಡ್ಮಾಣ್‌ನಲ್ಲಿ ಅಗೇಲು ಸೇವೆ ನೀಡಿದ್ದಾರೆ.
ಈ ವೇಳೆ ಭಕ್ತಿಭೂಷಣ್ ದಾಸ್ ಪ್ರಭುಜಿ, ಪದ್ಮನಾಭ ಗೋವಿನ ತೋಟ, ರಾಮಚಂದ್ರ ಮಾರಿಪಳ್ಳ, ಯಾದವ ಕೊಡಂಗೆ, ನವೀನ್ ಮಾರ್ಲ ಮೊದಲಾದವರು ಉಪಸ್ಥಿತ ರಿದ್ದರು. ಮುಂದೆ ಈ ಕುಟುಂಬ ಉಕ್ರೇನ್‌ಗೆ ಪ್ರಯಾಣ ಬೆಳೆಸಲಿದೆ.