ಕೀವ್: ರಷ್ಯಾದ ಸೈನಿಕರು ತಂಗಿದ್ದ ಪೂರ್ವ ಡಾನೆಸ್ಕ್ನ ಕಟ್ಟಡವೊಂದನ್ನು ಗುರಿಯಾಗಿಸಿಕೊಂಡು ಉಕ್ರೇನ್ ಸೇನೆಯು ಸೋಮವಾರ ಭಾರೀ ರಾಕೆಟ್ ದಾಳಿ ನಡೆಸಿದೆ. ಇದರಲ್ಲಿ ರಷ್ಯಾದ 400 ಸೈನಿಕರು ಸಾವಿಗೀಡಾಗಿದ್ದಾರೆ ಎಂದು ಉಕ್ರೇನ್ ಹೇಳಿದೆ. ಆದರೆ ರಷ್ಯಾ, ತನ್ನ 63 ಸೈನಿಕರು ಅಸುನೀಗಿರುವುದಾಗಿ ಹೇಳಿಕೊಂಡಿದೆ.
10 ತಿಂಗಳ ಹಿಂದೆ ಯುದ್ಧ ಆರಂಭವಾದ ಬಳಿಕ ಪುತಿನ್ ಸೇನೆಯ ಮೇಲೆ ಉಕ್ರೇನ್ ನಡೆಸಿದ ಭೀಕರ ಪ್ರತಿದಾಳಿಯಲ್ಲಿ ಇದೂ ಒಂದು.
ಉಕ್ರೇನ್ ಸೈನಿಕರು ಒಟ್ಟು 6 ರಾಕೆಟ್‌ಗಳನ್ನು ಉಡಾವಣೆ ಮಾಡಿದ್ದಾರೆ. ಈ ಪೈಕಿ ಎರಡನ್ನು ರಷ್ಯಾ ಸೇನೆ ಧ್ವಂಸಗೊಳಿಸಿದೆ. ಉಳಿದ ರಾಕೆಟ್‌ಗಳು ರಷ್ಯಾ ಸೈನಿಕರಿದ್ದ ಶಾಲೆಗೆ ಬಂದು ಬಿದ್ದ ಕಾರಣ ಭಾರೀ ಸಾವು ನೋವು ಸಂಭವಿಸಿದೆ.