ಅಂಕಾರ (ಟರ್ಕಿ): ರಣರಂಗದಲ್ಲಿ ರಷ್ಯಾ-ಉಕ್ರೇನ್ ಕಾದಾಟ ಒಂದೆಡೆಯಾದರೆ, ಮತ್ತೂಂದೆಡೆ ಜಾಗತಿಕ ವೇದಿಕೆಯಲ್ಲೇ ಈ ಎರಡೂ ದೇಶಗಳ ಪ್ರತಿನಿಧಿಗಳು ಪರಸ್ಪರ ಗುದ್ದಾಟ ನಡೆಸಿದ್ದಾರೆ. ಉಕ್ರೇನ್ ಧ್ವಜ ಕಸಿದ ರಷ್ಯಾ ಪ್ರತಿನಿಧಿಗೆ ಉಕ್ರೇನ್ ಸಂಸದ ಕಪಾಳಮೋಕ್ಷ ಮಾಡಿರುವ ವಿಡಿಯೊ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು, ಟರ್ಕಿ ರಾಜಧಾನಿ ಅಂಕಾರದಲ್ಲಿ ಕಪ್ಪುಸಮುದ್ರದ ಅರ್ಥಿಕ ಸಮುದಾಯದ 61ನೇ ಸಂದೀಯ ಸಭೆ ನಡೆದಿದೆ. ಇದರಲ್ಲಿ ಭಾಗಿಯಾಗಿದ್ದ ಉಕ್ರೇನ್ ಸಂಸದ ಒಲೆಕ್ಸಾಂಡರ್ ಮಾರಿಕೋವ್ಸ್‌ಕಿ ತಮ್ಮ ರಾಷ್ಟ್ರದ ಧ್ವಜ ಹಿಡಿದು ನಿಂತಿದ್ದರು. ಏಕಾಏಕಿ ಅವರತ್ತ ಧಾವಿಸಿದ ರಷ್ಯಾದ ಪ್ರತಿನಿಧಿ, ಇದಕ್ಕಿದ್ದಂತೆ ಧ್ವಜ ಕಸಿದು ನಡೆಯುತ್ತಾರೆ. ಅವರನ್ನು ಹಿಂಬಾಲಿಸಿ ಓಡಿಬಂದ ಒಲೆಕ್ಸಾಂಡರ್ ರಷ್ಯಾ ಪ್ರತಿನಿಧಿಯನ್ನು ಥಳಿಸಿ, ಧ್ವಜ ಹಿಂಪಡೆಯುತ್ತಾರೆ. ಬಳಿಕ ಸಭೆಯಲ್ಲಿದ್ದ ಇತರೆ ಪ್ರತಿನಿಧಿಗಳು ಇಬ್ಬರ ಹೊಡೆದಾಟ ಬಿಡಿಸಿದ್ದಾರೆ. ಈ ವಿಡಿಯೊವನ್ನು ಒಲೆಕ್ಸಾಂಡರ್ ತಮ್ಮ ಜಾಲತಾಣ ಖಾತೆಯಲ್ಲೂ ಹಂಚಿಕೊಂಡಿದ್ದು, ನಮ್ಮ ರಾಷ್ಟ್ರಧ್ವಜದಿಂದ ದೂರವಿರಿ ಎಂಬ ಎಚ್ಚರಿಕೆ ನೀಡಿದ್ದಾರೆ. ಸಂಸದನ ರಾಷ್ಟ್ರಪ್ರೇಮಕ್ಕೆ ಉಕ್ರೇನಿಗರು ಶಹಬ್ಟಾಸ್‌ಎಂದಿದ್ದಾರೆ.