ಕೀವ್(ಉಕ್ರೇನ್): ಉಕ್ರೈನ್ ಆಂತರಿಕ ಸಚಿವ ಹಾಗೂ ಮೂವರು ಮಕ್ಕಳು ಸೇರಿದಂತೆ 18 ಮಂದಿ ಉಕ್ರೇನ್ ನ ಹೊರವಲಯದ ಕೀವ್ ನಲ್ಲಿರುವ ಶಿಶುವಿಹಾರದ ಬಳಿ ಸಂಭವಿಸಿದ ಹೆಲಿಕಾಪ್ಟರ್ ಪತನದಲ್ಲಿ ದುರಂತ ಅಂತ್ಯಕಂಡಿರುವ ಘಟನೆ ಬುಧವಾರ (ಜನವರಿ 18) ನಡೆದಿದೆ.
ಇದನ್ನೂ ಓದಿ:ಪ್ರಧಾನಿ ಮೋದಿ ಮೇಲಿಂದ ಮೇಲೆ ರಾಜ್ಯಕ್ಕೆ ಸೈಕಲ್ ತುಳಿಯುತ್ತಿದ್ದಾರೆ : ಸಿದ್ದರಾಮಯ್ಯ
ಹೆಲಿಕಾಪ್ಟರ್ ಶಿಶುವಿಹಾರ ಮತ್ತು ಬ್ರೋವರೈನಲ್ಲಿರುವ ರೆಸಿಡೆನ್ಸಿಯಲ್ ಕಟ್ಟಡದ ಸಮೀಪ ಪತನಗೊಂಡಿತ್ತು. ಬ್ರೋವರೈ ರಾಜಧಾನಿ ಕೀವ್ ಸಮೀಪದ ಪಟ್ಟಣವಾಗಿದೆ. ಇಂದು ಸಂಭವಿಸಿದ ದುರಂತ ಉಕ್ರೇನ್ ನಲ್ಲಿ ರಷ್ಯಾ ಸೇನಾಪಡೆ ಈ ಮೊದಲು ನಡೆಸಿದ್ದ ಯುದ್ಧದ ಸನ್ನಿವೇಶದಂತಿತ್ತು ಎಂದು ವರದಿ ತಿಳಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ಬೀಭತ್ಸ ದುರಂತದ ದೃಶ್ಯಗಳ ತುಣುಕು ಹರಿದಾಡುತ್ತಿದ್ದು, ಸುಟ್ಟು ಹೋದ ಶವಗಳು, ಹೆಲಿಕಾಪ್ಟರ್ ನ ಅವಶೇಷಗಳು ಒಟ್ಟು ಸೇರಿ ಕಸದ ರಾಶಿಯಂತೆ ಕಟ್ಟಡದ ಸಮೀಪ ಬಿದ್ದಿದ್ದು, ಕಾರುಗಳು ಜಖಂಗೊಂಡಿರುವ ದೃಶ್ಯ ವಿಡಿಯೋದಲ್ಲಿರುವುದಾಗಿ ವರದಿ ವಿವರಿಸಿದೆ.
Related Articles
ಹೆಲಿಕಾಪ್ಟರ್ ದುರಂತದಲ್ಲಿ ಉಕ್ರೇನ್ ಆಂತರಿಕ ಸಚಿವ ಡೆನೈಸ್ ಮೊನಾಸ್ಟ್ರೈಸ್ಕೈ ಕೊನೆಯುಸಿರೆಳೆದಿದ್ದು, ಒಟ್ಟು 18 ಜನರು ವಿಧಿವಶರಾಗಿದ್ದಾರೆ. ಘಟನೆಯಲ್ಲಿ 15 ಮಕ್ಕಳು ಸೇರಿದಂತೆ 25 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ, ರಕ್ಷಣಾ ತಂಡ ಕಾರ್ಯನಿರ್ವಹಿಸುತ್ತಿದೆ. ಹೆಲಿಕಾಪ್ಟರ್ ಪತನಕ್ಕೆ ನಿಖರ ಕಾರಣ ಏನೆಂದು ತಿಳಿದು ಬಂದಿಲ್ಲ ಎಂದು ವರದಿ ತಿಳಿಸಿದೆ.