Advertisement

ಉಕ್ರೇನ್ ಸಂಕಷ್ಟ: ಮಂಗಳೂರಿಗೆ ಬಂದ ಅನುಷಾಗೆ ಜನಪ್ರತಿನಿಧಿಗಳಿಂದ ಸ್ವಾಗತ

02:49 PM Mar 03, 2022 | Team Udayavani |

ಮಂಗಳೂರು : ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ವಿದ್ಯಾರ್ಥಿನಿ ಮಂಗಳೂರಿನ ಬಿಜೈ ನ್ಯೂ ರೋಡ್ ನಿವಾಸಿ ಅನುಷಾ ಭಟ್ ಅವರು ಗುರುವಾರ ಮನೆಗೆ ಆಗಮಿಸಿದ್ದಾರೆ.

Advertisement

ರೊಮೇನಿಯಾದಿಂದ ಮುಂಬೈಗೆ ಆಗಮಿಸಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅನುಷಾ ಭಟ್ ಅವರನ್ನು ಸಂಸದ ನಳಿನ್ ಕುಮಾರ್ ಕಟೀಲ್,ಶಾಸಕ ವೇದವ್ಯಾಸ ಕಾಮತ್,ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಸ್ವಾಗತಿಸಿದರು. ಅನುಷಾ ಪೋಷಕರು ಮತ್ತು ಸಂಬಂಧಿಕರು ಏರ್ ಪೊರ್ಟ್ ನಲ್ಲಿದ್ದರು.

ಉಕ್ರೇನ್ ನ ವಿನ್ನೆಸ್ಟ್ಯಿಯಾ ನಗರದ ನ್ಯಾಷನಲ್ ಕಾಲೇಜಿನಲ್ಲಿ ಎಂಬಿಬಿಎಸ್ ಶಿಕ್ಷಣ ಪಡೆಯುತ್ತಿದ್ದ ಅನುಷಾ, ಯುದ್ದಗ್ರಸ್ಥ ಪ್ರದೇಶದಿಂದ 200 ಕಿ.ಮೀ ದೂರದಲ್ಲಿದ್ದರು. ಅನುಷಾ ಭಟ್ ಅವರು ತವರಿಗೆ ಆಗಮಿಸಿದ ಮಂಗಳೂರು ಮೂಲದ ಮೊದಲ ವಿದ್ಯಾರ್ಥಿನಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next