Advertisement
ವಿಶ್ವದೆಲ್ಲೆಡೆ ಕೋವಿಡ್-19 ಪ್ರಾರಂಭವಾದ ದಿನದಿಂದಲೂ ಸಾಕಷ್ಟು ಸಾವು ನೋವುಗಳು ಸಂಭವಿಸಿವೆ. ಆದರೆ ಇಷ್ಟಾದರೂ ಬುದ್ಧಿ ಕಲಿಯದೇ ಮುಂಜಾಗ್ರತೆ ತೆಗೆದುಕೊಳ್ಳಿ ಎಂದಾಗ ಲೇವಡಿ ಮಾಡಿದ್ದ ಉಕ್ರೇನ್‌ನಲ್ಲೀಗ ಪರಿಸ್ಥಿತಿ ಚಿಂತನಾಜನಕವಾಗುತ್ತಿದೆ. ಅಲ್ಲಿನ ಒಂದು ಧಾರ್ಮಿಕ ಕೇಂದ್ರವೊಂದು ಈಗ ಕೊರೊನಾ ಹಾಟ್‌ಸ್ಪಾಟ್. ವಾಸ್ತವವನ್ನು ಕಡೆಗಣಿಸಿದ್ದಕ್ಕೆ ಈಗ ಉಕ್ರೇನ್ ಸಮಸ್ಯೆಯಲ್ಲಿ ಸಿಲುಕಿದೆ.
ಶತಮಾನದ ಇತಿಹಾಸವಿರುವ ಈ ಧಾರ್ಮಿಕ ಕೇಂದ್ರ ಕಟ್ಟಾ ಸಾಂಪ್ರದಾಯಿಕ ನೆಲೆಯದ್ದು. ಇನ್ನು ಕೋವಿಡ್-19 ಹರಡುವಿಕೆ ನಿಯಂತ್ರಣ ಕುರಿತು ಕೆಲವು ಧಾರ್ಮಿಕ ಆಚರಣೆಗಳ ಮೇಲೆ ನಿಷೇಧ ಹೇರಿದ್ದರೂ ಪಾಲಿಸದಿರುವುದು ಈ ಆಪತ್ತಿಗೆ ಕಾರಣ ಎನ್ನಲಾಗುತ್ತಿದೆ. ಸಾಮಾಜಿಕ ಅಂತರ, ಲಾಕ್‌ಡೌನ್ ನಿಯಮಗಳು, ಆದೇಶಗಳು ಜಾರಿಯಲ್ಲಿದ್ದರೂ ಈ ಕೇಂದ್ರದಲ್ಲಿ ಎಂದಿನಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಜತೆಗೆ ಸಾಮಾಜಿಕ ಅಂತರ ಪಾಲನೆಗೆ ಯಾವುದೇ ಮಹತ್ವ ನೀಡಿರಲಿಲ್ಲ.
ಆದರೆ ಮಾರ್ಚ್ ಮಧ್ಯದಲ್ಲಿ ಈ ಪ್ರದೇಶದಲ್ಲಿ ಸೋಂಕಿತ ಪ್ರಕರಣಗಳು ಹೆಚ್ಚತೊಡಗಿದವು. ಆಗ ಎಚ್ಚೆತ್ತ ಧಾರ್ಮಿಕ ಕೇಂದ್ರ ಕಟ್ಟು ನಿಟ್ಟಾದ ನಿಯಮಗಳನ್ನು ಜಾರಿಗೊಳಿಸಿದೆ. ಪ್ರವೇಶ ನಿಬಂಧನೆಗಳನ್ನು ಹೇರಿದೆ. ಆದರೆ ಪರಿಸ್ಥಿತಿ ಆಗಲೇ ಕೈ ಮೀರಿತ್ತು.
Related Articles
ಇನ್ನೂ, ಕೇಂದ್ರಕ್ಕೆ ಸಂಬಂಧಪಟ್ಟ 140 ಕ್ಕೂ ಹೆಚ್ಚು ಜನರಿಗೆ ಕೋವಿಡ್-19 ಪರೀಕ್ಷೆ ಮಾಡಿದ್ದು, ಮೂವರು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಆದರೆ ನಿಜವಾದ ಅಂಕಿ-ಅಂಶಗಳಿಗೆ ಹೋಲಿಸಿದರೆ, ಈ ಪ್ರದೇಶದಲ್ಲಿ 700ಕ್ಕೂ ಹೆಚ್ಚು ಪ್ರಕರಣಗಳು ಮತ್ತು 12 ಸಾವು ಘಟಿಸಿದೆ. ಒಟ್ಟಾರೆಯಾಗಿ ಉಕ್ರೇನ್‌ನಲ್ಲಿ 4,660ಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು ಮತ್ತು 125 ಸಾವುಗಳು ದಾಖಲಾಗಿವೆ.
Advertisement