Advertisement

ನ್ಯಾಟೋ ಸದಸ್ಯತ್ವ ತ್ವರಿತಗೊಳಿಸಲು ಉಕ್ರೇನ್‌ ಮನವಿ

11:19 PM Sep 30, 2022 | Team Udayavani |

ಕೀವ್‌: ದಯವಿಟ್ಟು ನಮಗೆ ತ್ವರಿತವಾಗಿ ನ್ಯಾಟೋ ಸದಸ್ಯತ್ವ ನೀಡಿ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಶುಕ್ರವಾರ ನ್ಯಾಟೋಗೆ ಮನವಿ ಸಲ್ಲಿಸಿದ್ದಾರೆ. ಉಕ್ರೇನ್‌ನ ನಾಲ್ಕು ಪ್ರದೇಶಗಳು ರಷ್ಯಾದೊಂದಿಗೆ ವಿಲೀನಗೊಂಡ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

Advertisement

ನಾವು ಈಗಾಗಲೇ ನ್ಯಾಟೋ ಮಿತ್ರಪಕ್ಷಗಳೊಂದಿಗೆ ಮೈತ್ರಿಗೆ ಸಂಬಂಧಿಸಿದ ಎಲ್ಲ ನಿಯಮಗಳನ್ನೂ ಪಾಲಿಸಿದ್ದೇವೆ. ಆದಷ್ಟು ಬೇಗ ಸದಸ್ಯತ್ವ ನೀಡುವಂತೆ ಕೋರಿರುವ ಅರ್ಜಿಗೆ ಸಹಿ ಹಾಕುವ ಮೂಲಕ ನಾವು ನಿರ್ಣಾಯಕ ಹೆಜ್ಜೆ ಇಡುತ್ತಿದ್ದೇವೆ ಎಂದೂ ಝೆಲೆನ್‌ಸ್ಕಿ ಹೇಳಿದ್ದಾರೆ.

ರಷ್ಯಾ ಅಧ್ಯಕ್ಷ ಪುತಿನ್‌ ಅವರು ಉಕ್ರೇನ್‌ನ ಡಾನೆಸ್ಕ್, ಖೇರ್ಸಾನ್‌, ಲುಹಾಂಸ್ಕ್ ಮತ್ತು ಝೆಪೋರ್‌ಝಿಯಾ ಪ್ರದೇಶಗಳನ್ನು ವಿಲೀನ ಮಾಡಿಕೊಳ್ಳುವ ಒಪ್ಪಂದಕ್ಕೆ ಅದ್ಧೂರಿ ಸಮಾರಂಭವೊಂದರಲ್ಲಿ ಸಹಿ ಹಾಕಿದ ಕೂಡಲೇ ಝೆಲೆನ್‌ಸ್ಕಿ ಈ ಹೆಜ್ಜೆ ಇಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next