Advertisement

UKP; ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ ಜಾರಿ ಹೋರಾಟಕ್ಕೆ 150ಕ್ಕೂ ಹೆಚ್ಚು ಶ್ರೀಗಳ ಬಲ

10:24 PM Dec 08, 2024 | Team Udayavani |

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ (UKP) 3ನೇ ಹಂತವನ್ನು ಏಕಕಾಲಕ್ಕೆ ಪೂರ್ಣಗೊಳಿಸುವಂತೆ ಒತ್ತಾಯಿಸಿ ಸಂತ್ರಸ್ತರು ಕಳೆದ 5 ದಿನಗಳಿಂದ ನಡೆಸುತ್ತಿರುವ ಅಹೋರಾತ್ರಿ ಹೋರಾಟಕ್ಕೆ 150ಕ್ಕೂ ಅಧಿಕ ಸ್ವಾಮೀಜಿಗಳ ಬೆಂಬಲ ದೊರೆತಿದೆ.

Advertisement

ಹೋರಾಟ ತೀವ್ರಗೊಳ್ಳುತ್ತಿದ್ದಂತೆ ರವಿವಾರ ಸ್ವತಃ ಸಚಿವ ಆರ್‌.ಬಿ. ತಿಮ್ಮಾಪುರ ಹೋರಾಟದ ಸ್ಥಳಕ್ಕೆ ಭೇಟಿ ನೀಡಿ, ನಾನು ಸಚಿವ-ಶಾಸಕ ಆನಂತರ. ಮೊದಲು ನಾನೊಬ್ಬ ರೈತ. ಈ ಹೋರಾಟಕ್ಕೆ ರೈತನಾಗಿ ಬೆಂಬಲ ಕೊಡುವೆ, ಸಚಿವನಾಗಿ ನನ್ನ ಜವಾಬ್ದಾರಿ ನಿಭಾಯಿಸುವೆ ಎಂದು ಹೇಳಿದರು. ಸೋಮವಾರ ದಿಂಗಾಲೇಶ್ವರ ಶ್ರೀ, ತೋಂಟದ ಸಿದ್ಧಲಿಂಗ ಶ್ರೀ, ನಿಡಸೋಸಿ ಶ್ರೀಗಳ ನೇತೃತ್ವದಲ್ಲಿ 150ಕ್ಕೂ ಹೆಚ್ಚು ಸ್ವಾಮೀಜಿಗಳು ಹೋರಾಟದ ಸ್ಥಳಕ್ಕೆ ಆಗಮಿಸಿ ಬೆಂಬಲ ವ್ಯಕ್ತಪಡಿಸಲಿದ್ದಾರೆ.

ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯ ವಕೀಲರು ಡಿ. 9ರಂದು ಕೋರ್ಟ್‌ ಕಲಾಪದಿಂದ ದೂರ ಉಳಿದು ಹೋರಾಟಕ್ಕೆ ಬೆಂಬಲಿಸಲಿದ್ದಾರೆ. ಯುಕೆಪಿ ಪೂರ್ಣಕ್ಕೆ ಸರಕಾರ ತತ್‌ಕ್ಷಣ ಸೂಕ್ತ ನಿರ್ಧಾರ ಪ್ರಕಟಿಸದಿದ್ದರೆ ಪ್ರತ್ಯೇಕ ರಾಜ್ಯದ ಕೂಗು ಅನಿವಾರ್ಯ ಎಂದು ವಕೀಲ ಸಂಘಗಳು ಎಚ್ಚರಿಕೆ ನೀಡಿವೆ.

Advertisement

Udayavani is now on Telegram. Click here to join our channel and stay updated with the latest news.

Next