ಲಂಡನ್: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಆಪ್ತರಾದ ಸರ್ ಗೆವಿನ್ ಮಿಲಿಯಮ್ಸ್‌ನ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಕನ್ಸರ್ವೇಟಿವ್ ಪಕ್ಷದ ತಮ್ಮ ಸಹೋದ್ಯೋಗಿಗಳು ಮತ್ತು ಸರ್ಕಾರಿ ಉದ್ಯೋಗಿಗಳೊಂದಿಗೆ ಅಸಭ್ಯ ವರ್ತನೆ ತೋರಿದ ಆರೋಪವನ್ನು ಗೆವಿನ್ ಎದುರಿಸುತ್ತಿದ್ದರು.
ಅವರನ್ನು ಸಚಿವ ಸಂಪುಟಕ್ಕೆ ನೇಮಿಸಿದ ರಿಷಿ ಸುನಕ್ ಅವರ ಮೇಲೆ ಪ್ರತಿಪಕ್ಷವು ಮುಗಿಬಿದ್ದಿದ್ದವು. ಅವರ ರಾಜೀನಾಮೆ ಪಡೆಯುವಂತೆ ರಿಷಿ ಸುನಕ್ ಅವರ ಮೇಲೆ ಒತ್ತಡ ಹೆಚ್ಚಿತ್ತು. ಸಂಪುಟಕ್ಕೆ ನೇಮಕವಾದ ಕೆಲವು ದಿನಗಳಲ್ಲೇ ಸಚಿವರೊಬ್ಬರು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ರಿಷಿ ಸುನಕ್ ಅವರ ನಾಯಕತ್ವವನ್ನು ಪ್ರತಿಪಕ್ಷಗಳು ಟೀಕಿಸಿವೆ.
“ಇದು ಕಳಪೆ ನಿರ್ಧಾರ ಮತ್ತು ಕಳಪೆ ನಾಯಕತ್ವದ ಸಂಕೇತ,’ ಎಂದು ಲೇಬರ್ ಪಕ್ಷದ ನಾಯಕ ಸರ್ ಕೀರ್ ಸ್ಟಾಮರ್ ದೂರಿದ್ದಾರೆ.