Advertisement

ಬ್ರಿಟನ್‌ ಪ್ರಧಾನಿ ಹುದ್ದೆಗೇರಲು ಜನಾಂಗೀಯ ಮೂಲ ಅಡ್ಡಿಯಾಗಲ್ಲ: ರಿಷಿ ಸುನಾಕ್‌

10:23 AM Aug 01, 2022 | Team Udayavani |

ಲಂಡನ್‌: ಬ್ರಿಟನ್‌ ಪ್ರಧಾನಿ ಹುದ್ದೆಗೇರಲು ಜನಾಂಗೀಯ ಮೂಲ ವಿಚಾರ ಅಡ್ಡಿ ಬರುವುದಿಲ್ಲ ಎಂದು ಪ್ರಸ್ತುತ ನಡೆಯುತ್ತಿರುವ ಅಲ್ಲಿನ ಪ್ರಧಾನಿ ಹುದ್ದೆಯ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಭಾರತ ಮೂಲದ ರಿಷಿ ಸುನಾಕ್‌ ತಿಳಿಸಿದ್ದಾರೆ.

Advertisement

ಆಡಳಿತಾರೂಢ ಕನ್ಸರ್ವೇಟಿವ್‌ ಪಕ್ಷದ ನಾಯಕರನ್ನಾಗಿ ಆರಿಸುವ ಪ್ರಕ್ರಿಯೆ ಈಗ ನಿರ್ಣಾಯಕ ಹಂತ ತಲುಪಿದೆ.
ರಿಷಿ ಭಾರತ ಮೂಲದವರಾಗಿರು ವುದರಿಂದ ಅವರಿಗೆ ಪ್ರಧಾನಿ ಹುದ್ದೆ ಕೈ ತಪ್ಪಲಿದೆ.

ಕನ್ಸರ್ವೇಟಿವ್‌ ಪಕ್ಷದ ಸಂಸದರು, ತಮ್ಮ ನೆಲದವರೇ ಆದ ಟ್ರಾಸ್‌ರನ್ನು ನಾಯಕಿಯನ್ನಾಗಿ ಆಯ್ಕೆ ಮಾಡುತ್ತಾರೆ ಎನ್ನಲಾಗುತ್ತಿದೆ. ಇದನ್ನು ಅಲ್ಲಗಳೆದಿರುವ ರಿಷಿ, “ಕನ್ಸರ್ವೇಟಿವ್‌ ಪಕ್ಷದ ಸಂಸದರು ಇಂಥ ವಿಚಾರಗಳನ್ನು ಗಣನೆಗೆ ತೆಗೆದುಕೊಳ್ಳಲಾರರು ಎಂದು ನನಗನ್ನಿಸುತ್ತದೆ.

ಅಲ್ಲದೆ, ಹೀಗೆ ಆಲೋಚಿಸುವುದು ಕೂಡ ಸರಿಯಲ್ಲ ಎಂಬುದು ನನ್ನ ಭಾವನೆ’ ಎಂದಿದ್ದಾರೆ.

 

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next