Advertisement

ಬ್ರಿಟನ್‌: ವಲಸಿಗರಿಗೆ ಶೀಘ್ರವೇ ತಡೆ? ಸುಯೆಲ್ಲಾ ಬ್ರಾವರ್ಮೆನ್‌

11:33 PM Oct 02, 2022 | Team Udayavani |

ಲಂಡನ್‌: ಬ್ರಿಟನ್‌ನ ಲಿಜ್‌ ಟ್ರಸ್‌ ಸರಕಾರ ಈ ಹಿಂದೆ ಆಶ್ವಾಸನೆ ನೀಡಿದ್ದಂತೆ ವಲಸಿಗರ ಮೇಲೆ ಕಡಿವಾಣ ಹಾಕುವ ಚಿಂತನೆಯಲ್ಲಿದೆ.

Advertisement

ವಲಸಿಗರ ನೀತಿಯಲ್ಲಿ ಬದಲಾವಣೆ ತರುವ ಜತೆ ವಲಸಿಗರ ಸಂಖ್ಯೆ ಕಡಿಮೆ ಮಾಡುವುದಾಗಿ ಗೃಹ ಸಚಿವೆ ಭಾರತ ಮೂಲದ ಸುಯೆಲ್ಲಾ ಬ್ರಾವರ್ಮೆನ್‌ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

“ಇಲ್ಲಿ ಕಡಿಮೆ ಕೌಶಲವಿರುವ ಅತೀ ಹೆಚ್ಚು ವಲಸಿಗರಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಿದೆ. ಅವರಿಂದ ಆರ್ಥಿಕತೆಗೆ ಲಾಭವಿಲ್ಲ’ ಎಂದಿದ್ದಾರೆ.

2021ರ ಜೂನ್‌ ನಲ್ಲಿ ಅಂತ್ಯವಾದ ಆರ್ಥಿಕ ವರ್ಷದಲ್ಲಿ ಒಟ್ಟು 2.39 ಲಕ್ಷಮಂದಿ ವಲಸೆ ಬಂದಿದ್ದಾರೆ. ಈ ಪೈಕಿ ಭಾರತೀಯರ ಸಂಖ್ಯೆ ಹೆಚ್ಚು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next