ನವದೆಹಲಿ : ಕೋವಿಡ್ ಲಾಕ್ ಡೌನ್ ವೇಳೆ ಪ್ರಪಂಚದ ನಾನಾ ಭಾಗದ ಜನ ತಮ್ಮ ಇಷ್ಟವಾದದ್ದಕ್ಕೆ ಪರಿತಪಿಸಿದ್ದಾರೆ. ಬರೀ ಮನೆಯಲ್ಲೇ ಕೂತು ಕೂತು ಬೇಸರವಾಗಿ ಜನರಿಗೆ ಏನು ಮಾಡಬೇಕೆಂದು ತಲೆಯೇ ಓಡದಂತಾಗಿತ್ತು. ಆ ವೇಳೆ ತಮಗಿಷ್ಟವಾದ ತಿನಿಸನ್ನು ಮಿಸ್ ಮಾಡಿಕೊಂಡು ಹಲವಾರು ಮಂದಿ ನೂರಾರು ಕಿ.ಮೀ ಹೋಗಿ ತಿಂದು ಬಂದಿದ್ದಾರೆ.
ಕಳೆದ ದಿನಗಳಲ್ಲಿ ಒಂದು ಸುದ್ದಿ ಹರಿದಾಡಿದ್ದು ಯುಕೆ ಮಹಿಳೆಯೊಬ್ಬರು ತಮ್ಮ ಇಷ್ಟದ ತಿನಿಸಾದ ಬರ್ಗರ್ ಅನ್ನು ತಿನ್ನಲ್ಲು ಬರೊಬ್ಬರಿ 160 ಕಿ.ಮೀ ಹೋಗಿದ್ದರು. ಕೋವಿಡ್ ಸಮಯದಲ್ಲಿ ಅನಾವಶ್ಯಕವಾಗಿ ಓಡಾಟ ಮಾಡಿದ್ದಕ್ಕೆ ಪೊಲೀಸರಿಗೆ ದಂಡವನ್ನೂ ಕಟ್ಟಿದ್ದರು. ಈ ಸುದ್ದಿಯನ್ನೇ ಹೋಲುವಂತಹ ಮತ್ತೊಂದು ಸುದ್ದಿ ಇತ್ತೀಚೆಗೆ ಬೆಳಕಿಗೆ ಬಂದಿದೆ.
ಯುಕೆ ದೇಶದ ಒಬ್ಬ ವ್ಯಕ್ತಿ ಲಾಕ್ ಡೌನ್ ವೇಳೆ ತನ್ನ ಇಷ್ಟದ ತಿಂಡಿಯನ್ನು ತಿನ್ನಲ್ಲು 130 ಕಿ.ಮಿ ಹೆಲಿಕಾಪ್ಟರ್ ನಲ್ಲಿ ಹೋಗಿದ್ದರಂತೆ. ಆ ವ್ಯಕ್ತಿಯ ಇಷ್ಟದ ತಿನಿಸಾದ ಸ್ವಾಂಡ್ವಿಚ್ ತಿನ್ನಲ್ಲು ಹೆಲಿಕಾಪ್ಟರ್ ನಲ್ಲಿ 130 ಕಿ.ಮೀ ಹೋಗಿರುವ ಸುದ್ದಿ ಇದೀಗ ಸದ್ದು ಮಾಡುತ್ತಿದೆ. ಅಲ್ಲದೆ ತಿಂಡಿಯನ್ನು ಪಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಯುಕೆ ಮೂಲಕ ಫಾರ್ಮ್ ಶಾಪ್ ಈ ವಿಡಿಯೋವನ್ನು ಶೇರ್ ಮಾಡಿದೆ. ಈ ಫಾರ್ಮ್ ಶಾಪ್ ಸಾವಯವ ಪದಾರ್ಥಗಳ ಮಾರಾಟಕ್ಕೆ ಹೆಚ್ಚು ಫೇಮಸ್ಸಾಗಿದೆ. ಇಲ್ಲಿ ಬೇಕರಿ ತಿನಿಸುಗಳು ಸೇರಿದಂತೆ ಬೇರೆ ಬೇರೆ ರೀತಿಯ ತಿನಿಸುಗಳೂ ಸಿಗುತ್ತವೆ. ಇಲ್ಲಿನ ರುಚಿಗೆ ಮೆಚ್ಚಿ ವ್ಯಕ್ತಿಯೊಬ್ಬ ಹೆಲಿಕಾಪ್ಟರ್ ನಲ್ಲಿ ಬಂದು ತಿನಿಸನ್ನು ಕೊಂಡು ಹೋಗಿದ್ದಾರೆ.