Advertisement

ಯು.ಕೆ. ಬಡ್ಡಿ ದರ ಹೆಚ್ಚಳ: 27 ವರ್ಷಗಳಲ್ಲೇ ಗರಿಷ್ಠ

07:41 PM Aug 04, 2022 | Team Udayavani |

ಲಂಡನ್‌/ಮುಂಬೈ: ಹಣದುಬ್ಬರದಿಂದ ತತ್ತರಿಸುತ್ತಿರುವ ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಬಡ್ಡಿದರವನ್ನು ಶೇ.0.5 ಏರಿಕೆ ಮಾಡಲಾಗಿದೆ. ಬ್ಯಾಂಕ್‌ ಆಫ್ ಇಂಗ್ಲೆಂಡ್‌ ಈ ನಿರ್ಧಾರ ಕೈಗೊಂಡಿದೆ.  27 ವರ್ಷಗಳ ಬಳಿಕ ಅಂದರೆ 1995ರ ಬಳಿಕ ಗರಿಷ್ಠ ಪ್ರಮಾಣದಲ್ಲಿ ಬಡ್ಡಿದರ ಏರಿಕೆ ಮಾಡಲಾಗಿದೆ.

Advertisement

ಬ್ಯಾಂಕ್‌ನ ವಿತ್ತೀಯ ನೀತಿ ನಿರೂಪಣಾ ಸಮಿತಿ 8-1ರ ಅಂತರದಲ್ಲಿ ದರ ಏರಿಕೆಯ ತೀರ್ಮಾನ ಕೈಗೊಂಡಿದೆ. ದರ ಏರಿಕೆಯ ಬಳಿಕ ಬಡ್ಡಿಯ ಪ್ರಮಾಣ ಶೇ.1.75 ಆಗಿದೆ. ಇದರ ಹೊರತಾಗಿಯೂ ಹಣದುಬ್ಬರ ಪ್ರಮಾಣ ಶೇ.13ನ್ನು ಮೀರಿಸುವ ಸಾಧ್ಯತೆಗಳಿವೆ. ಕೆಲ ದಿನಗಳ ಹಿಂದಷ್ಟೇ ಅಮೆರಿಕದ ಫೆಡರಲ್‌ ರಿಸರ್ವ್‌ ಕೂಡ ಬಡ್ಡಿ ದರದಲ್ಲಿ ಹೆಚ್ಚಳ ಮಾಡಿತ್ತು.

ಈ ನಡುವೆ ಆರ್‌ಬಿಐನ ವಿತ್ತೀಯ ನೀತಿ ಪರಿಶೀಲನಾ ಸಮಿತಿ ಕೂಡ ಬುಧವಾರದಿಂದ ಸಭೆ ನಡೆಸುತ್ತಿದ್ದು, ಶುಕ್ರವಾರ ಮುಕ್ತಾಯಗೊಳ್ಳಲಿದೆ. ದೇಶದಲ್ಲಿ ಕೂಡ ಶೇ.0.4 ಬಡ್ಡಿ ದರ (40 ಬೇಸಿಸ್‌ ಪಾಯಿಂಟ್ಸ್‌) ಹೆಚ್ಚಳವಾಗುವ ಸಾಧ್ಯತೆ ಇದೆ.

 

Advertisement

Udayavani is now on Telegram. Click here to join our channel and stay updated with the latest news.

Next