Advertisement

ಯು.ಕೆ. ಹಣದುಬ್ಬರ ಪ್ರಮಾಣ ಶೇ.9ಕ್ಕೇರಿಕೆ! 40 ವರ್ಷಗಳಲ್ಲಿ ಕಾಣದಂಥ ಏರಿಕೆ

09:52 AM May 19, 2022 | |

ಲಂಡನ್‌: ಯುನೈಟೆಂಡ್‌ ಕಿಂಗ್‌ಡಮ್‌ ಅರ್ಥ ವ್ಯವಸ್ಥೆ ಬರೋ­ಬ್ಬರಿ ನಲವತ್ತು ವರ್ಷಗಳ­ಲ್ಲಿಯೇ ಗರಿಷ್ಠ ಎನ್ನಬಹುದಾದ ಹಣದುಬ್ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಬುಧವಾರ ಯು.ಕೆ. ಸರಕಾರದ ಆಫೀಸ್‌ ಫಾರ್‌ ನ್ಯಾಶನಲ್‌ ಸ್ಟಾಟಿಸ್ಟಿಕ್ಸ್‌ (ಒಎನ್‌ಎಸ್‌) ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಹಣದುಬ್ಬರ ಪ್ರಮಾಣ ಶೇ. 9 ಆಗಿದೆ. ಜಗತ್ತಿನಲ್ಲಿ ಮತ್ತೂಂದು ಆರ್ಥಿಕ ಹಿಂಜರಿತ ಉಂಟಾಗಲಿದೆ ಎಂಬ ಭೀತಿಯ ನಡುವೆಯೇ ಈ ಬೆಳವಣಿಗೆ ಉಂಟಾಗಿದೆ.

Advertisement

ಯು.ಕೆ. ವಿತ್ತ ಸಚಿವ ರಿಷಿ ಸುನಕ್‌ ಅವರು ಹಣದುಬ್ಬರ ಸ್ಥಿತಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಠಿನ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಇದ್ದಾರೆ. ಈ ಬಗ್ಗೆ ಮಾತನಾಡಿದ ಅವರು, “ಜಗತ್ತಿನ ಹಲವು ರಾಷ್ಟ್ರಗಳು ಹೆಚ್ಚಿನ ರೀತಿಯಲ್ಲಿ ಹಣದುಬ್ಬರದ ಸ್ಥಿತಿಯನ್ನು ಎದುರಿಸುತ್ತಿವೆ.

ಇಂಧನ ಕ್ಷೇತ್ರದಲ್ಲಿ ಉಂಟಾಗಿರುವ ಬೆಲೆ ಏರಿಕೆಯಿಂದಾಗಿ ಶೇ. 9ರ ಪ್ರಮಾಣದ ಹಣದುಬ್ಬರ ದರ ಏರಿಕೆಯಾಗಿದೆ. ಜಗತ್ತಿನಾದ್ಯಂತ ಉಂಟಾಗುತ್ತಿರುವ ಇಂಥ ಬೆಳವಣಿಗೆಗಳಿಂದ ಜನರನ್ನು ಪೂರ್ಣ ಪ್ರಮಾಣದಲ್ಲಿ ರಕ್ಷಿಸಲು ಸಾಧ್ಯವಿಲ್ಲ. ಆದರೆ, ಅದರ ಪ್ರಭಾವ ಜನರ ಮೇಲೆ ಬೀಳದಂತೆ ಕ್ರಮ ಕೈಗೊಳ್ಳಲು ಸಾಧ್ಯವಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಮತಾಂತರ ಯತ್ನ: ಕೇರಳದ ದಂಪತಿ ವಿರುದ್ಧ ಪ್ರಕರಣ ದಾಖಲು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next