Advertisement

ಅಕ್ಟೋಬರ್‌ 11ರ ನಂತರ ಯುಕೆ ಪ್ರಯಾಣಕ್ಕೆ ವಿಧಿಸಿದ್ದ 10 ದಿನಗಳ ಕ್ವಾರಂಟೈನ್‌ ರದ್ದು..!

04:37 PM Oct 11, 2021 | Team Udayavani |

ನವದೆಹಲಿ: ಭಾರತದಿಂದ ಯುಕೆಗೆ ತೆರಳುವ ಜನರಿಗೆ 10 ದಿನಗಳ ಕ್ವಾರಂಟೈನ್‌ ವಿಧಿಸದಂತೆ ಹಲವು ಸುತ್ತಿನ ಮಾತುಕತೆಗಳು ಬ್ರಿಟನ್ ಜೊತೆಗೆ ನಡೆದಿದೆ. ಆದರೆ, ಈಗ ಎರಡೂ ಸರ್ಕಾರಗಳು ಕೆಲವು ನಿಬಂಧನೆಗಳ ಜೊತೆಗೆ ಒಪ್ಪಂದಕ್ಕೆ ಬಂದಿವೆ. ಭಾರತದಲ್ಲಿ ನೀಡಲಾಗುವ ಕೋವಿಶೀಲ್ಡ್‌ ಲಸಿಕೆಯನ್ನು ಯುಕೆ ಸರ್ಕಾರವು ಪರಿಗಣಿಸಿದ್ದು ಭಾರತೀಯ ಪ್ರವಾಸಿಗರಿಗೆ ನಿಯಮಾವಳಿಗಳನ್ನು ಸಡಿಲಿಸಲಾಗಿದೆ.

Advertisement

ಈ ಸಮಸ್ಯೆಯನ್ನು ಪರಿಹರಿಸುವ ವೇಳೆಗೆ ಭಾರತದಲ್ಲಿರುವ ಬ್ರಿಟೀಷ್‌ ಹೈ ಕಮಿಷನ್‌ ಭಾರತದಲ್ಲಿ ಒಂದು ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ಅ.11ರ ನಂತರ ಭಾರತದಿಂದ ಪ್ರಯಾಣಿಸುವ ಪ್ರವಾಸಿಗರು‌ ಕೋವಿಶೀಲ್ಡ್‌ ಲಸಿಕೆ ಪಡೆದು ಕನಿಷ್ಠ 14 ದಿನಗಳು ಆಗಿರಬೇಕು ಅಥವಾ ಯಾವುದೇ ಯುಕೆ ಪ್ರಮಾಣಿತ ಲಸಿಕೆಗಳನ್ನು ಪಡೆದಿರಬೇಕು.  ಅಂತವರು 10ದಿನಗಳ ಕಾಲ ಕ್ವಾರಂಟೈನ್‌ ಆಗುವ ಅವಶ್ಯಕತೆಗಳಿಲ್ಲ ಮತ್ತು ತಲುಪುವ ಮೊದಲು ಕೋವಿಡ್‌ ಪರೀಕ್ಷೆಗಳನ್ನು ನಡೆಸುವ ಅಗತ್ಯವಿಲ್ಲ ಎಂದು ತಿಳಿಸಿದೆ.

ಇದನ್ನೂ ಓದಿ;- ಗೋವಾ ವಿಧಾನಸಭಾ ಚುನಾವಣೆ: ಎಲ್ಲ ಕ್ಷೇತ್ರಗಳಲ್ಲಿ ಸ್ಫರ್ಧಿಸಲು ಕಾಂಗ್ರೆಸ್ ಸಿದ್ಧತೆ

ನೀವು ಯುಕೆ ಪ್ರಮಾಣಿತ ಲಸಿಕೆಗಳಾದ ಆಕ್ಸಫರ್ಡ್‌, ಆಸ್ಟ್ರಾ ಝೆನೇಕಾ, ಪಿಫಿಝರ್‌ ಬಯೋ ಎನ್‌ ಟೆಕ್‌, ಮೋಡೆರ್ನಾ, ಜನ್ಸ್‌ಸೆನ್ ಅಥವಾ ಕೋವಿಶೀಲ್ಡ್‌ನ ಒಂದು ಲಸಿಕೆಗಳನ್ನು ಮಾತ್ರ ಪಡೆದಿದ್ದರೆ ಕಡ್ಡಾಯವಾಗಿ ಅಂತವರು ಪ್ರಯಾಣಿಸುವ 2 ದಿನಗಳ ಮೊದಲು ಕೋವಿಡ್‌-19 ತಪಾಸಣೆ ಮಾಡಿಸಿರಬೇಕು ಮತ್ತು ತಲುಪಿದ ಮೇಲೆ 10ದಿನಗಳ ಕ್ವಾರಂಟೈನ್‌ಗೆ ಕಡ್ಡಾಯವಾಗಿ ಒಳಗಾಗಬೇಕು ಎಂದು ತಿಳಿಸಿದೆ.

ಭಾರತೀಯ ಪ್ರವಾಸಿಗರು ಕೈಗೊಳ್ಳಬೇಕಾದ ಕ್ರಮಗಳು:-

  • ಪ್ರಯಾಣಿಸುವ ಮೊದಲು ಮುಂಗಡ ಕೋವಿಡ್‌ ಆರ್‌.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಿಸಿಕೊಳ್ಳಿ.
  • ʼದ ಹಿಂದುಸ್ಥಾನ್‌ ಟೈಮ್ಸ್‌ʼನ ವರದಿಯ ಪ್ರಕಾರ ಯುಕೆಗೆ ತಲುಪುವ 14 ದಿನಗಳ ಮುಂಚಿತವಾಗಿ 2ನೇ ಡೋಸ್‌ ಲಸಿಕೆ ಪಡೆದುಕೊಳ್ಳಿ.
  • ಪೂರ್ಣ ವ್ಯಾಕ್ಸಿನೇಟೆಡ್‌ ಆದ ಪ್ರಯಾಣಿಕರು ಯುಕೆಯಿಂದ ಹಿಂದಿರುಗುವ 2 ದಿನಗಳ ಮೊದಲು ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಿ.
Advertisement

ಈ ಎಲ್ಲಾ ನಿಯಮಗಳು ಅಕ್ಟೋಬರ್‌ 11ರ ಸಂಜೆ 4ಗಂಟೆಯ ನಂತರ ಜಾರಿಗೊಳ್ಳಲಿವೆ.

Advertisement

Udayavani is now on Telegram. Click here to join our channel and stay updated with the latest news.

Next