Advertisement

ಮುಂದಿನ ವಾರ ಲಸಿಕೆ; ಬ್ರಿಟನ್‌ನಲ್ಲಿ ಫೈಜರ್‌ ಲಸಿಕೆ ಬಳಕೆಗೆ ಒಪ್ಪಿಗೆ

12:46 AM Dec 03, 2020 | mahesh |

ಲಂಡನ್‌: ಕೋವಿಡ್ ಸೋಂಕಿನ ವಿರುದ್ಧ ಹೋರಾಟದಲ್ಲಿ ಮೊದಲನೇ ಯಶಸ್ಸು ಸಿಗುವ ದಿನಗಳು ಹತ್ತಿರವಾಗುತ್ತಿವೆ. ಫೈಜರ್‌/ಬಯೋಎನ್‌ಟೆಕ್‌ ಲಸಿಕೆಗೆ ಬ್ರಿಟನ್‌ನ ಮೆಡಿಸಿನ್‌ ಆ್ಯಂಡ್‌ ಹೆಲ್ತ್‌ಕೇರ್‌ ಪ್ರಾಡಕ್ಟ್ ರೆಗ್ಯುಲೇಟರಿ ಏಜೆನ್ಸಿ (ಎಂಎಚ್‌ಆರ್‌ಎ) ಒಪ್ಪಿಗೆ ನೀಡಿದ್ದು, ಮುಂದಿನ ವಾರದಿಂದಲೇ ಸೋಂಕಿಗೆ ಒಳಗಾಗುವ ಅಪಾಯ ಹೆಚ್ಚಿರುವ ಜನರಿಗೆ ಲಸಿಕೆ ನೀಡಲಾಗುತ್ತದೆ.

Advertisement

ಜಗತ್ತಿನಲ್ಲೇ ಲಸಿಕೆ ವಿತರಣೆಗೆ ಒಪ್ಪಿಗೆ ನೀಡಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಬ್ರಿಟನ್‌ ಪಾತ್ರವಾಗಿದೆ. ಒಟ್ಟು 8 ಲಕ್ಷ ಡೋಸ್‌ ಸಿದ್ಧ ಪಡಿಸಲಾಗಿದ್ದು, ಇವುಗಳನ್ನು 4 ಲಕ್ಷ ಮಂದಿಗೆ 2 ಬಾರಿ ನೀಡಬಹುದು. ಲಸಿಕೆ ಸಿಕ್ಕಿದ ತತ್‌ಕ್ಷಣ ದೇಶಾದ್ಯಂತ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬ್ರಿಟಿಷ್‌ ಸರಕಾರ ಹೇಳಿದೆ. ಬ್ರಿಟಿಷ್‌ ಸರಕಾರವು ಒಟ್ಟಾರೆ 40 ದಶಲಕ್ಷ ಡೋಸ್‌ಗಳಿಗಾಗಿ ಫೈಜರ್‌ಗೆ ಬೇಡಿಕೆ ಸಲ್ಲಿಸಿದೆ.

ಈಗಾಗಲೇ ಬಂದಿರುವ ವರದಿಯಂತೆ ಫೈಜರ್‌ ಲಸಿಕೆ ಶೇ. 95ರಷ್ಟು ಪರಿಣಾಮಕಾರಿಯಾಗಿದೆ. ಫೈಜರ್‌ ಕಂಪೆನಿಯ ಮಾಜಿ ವಿಜ್ಞಾನಿಯೊಬ್ಬರ ಪ್ರಕಾರ, ಎಲ್ಲರಿಗೂ ಲಸಿಕೆ ನೀಡುವ ಅಗತ್ಯವಿಲ್ಲ. ಕೊರೊನಾ ವೈರಸ್‌ ಪ್ರಭಾವ ಇಳಿಮುಖವಾಗುತ್ತಿದ್ದು, ಅಂತ್ಯವಾಗುವ ದಿನ ಹತ್ತಿರಕ್ಕೆ ಬರುತ್ತಿದೆ. ಇದಕ್ಕೆ ಪೂರಕವೆಂಬಂತೆ, ಭಾರತದಲ್ಲೂ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಅವರು, ದೇಶದ ಎಲ್ಲರಿಗೂ ಲಸಿಕೆ ನೀಡಲಾಗುತ್ತದೆ ಎಂದು ಎಲ್ಲಿಯೂ ಹೇಳಿಲ್ಲ ಎಂದಿದ್ದರು.

ಭಾರತದಲ್ಲಿ ಫೈಜರ್‌ ಸಿಗಲಿದೆಯೇ?
ಕೇಂದ್ರ ಸರಕಾರದ ಮೂಲಗಳ ಪ್ರಕಾರ, ಭಾರತದಲ್ಲಿ ಫೈಜರ್‌ ಲಸಿಕೆ ಬಳಕೆಗೆ ಸಿಗುವ ಸಾಧ್ಯತೆಗಳು ಕಡಿಮೆಯಿವೆ. ಫೈಜರ್‌, ಅಮೆರಿಕ ಮೂಲದ ಕಂಪೆನಿಯಾಗಿದ್ದು, ಭಾರತದಲ್ಲಿ ಈ ಲಸಿಕೆಯ ಪ್ರಯೋಗವೇ ನಡೆದಿಲ್ಲ.

ಯಾವ ಲಸಿಕೆ
ಎಷ್ಟು ಪರಿಣಾಮಕಾರಿ?
ಫೈಜರ್‌95%
ಮೊಡೆರ್ನಾ95%
ಸ್ಪುಟ್ನಿಕ್‌ 92%
ಅಸ್ಟ್ರಾಜೆನೆಕಾ- ಆಕ್ಸ್‌ಫ‌ರ್ಡ್‌ 70 %

Advertisement

1ಶೇ. 95 ಪರಿಣಾಮಕಾರಿಯಾಗಿರುವ
ಈ ಲಸಿಕೆಯನ್ನು 21 ದಿನಗಳ ಅಂತರ ದಲ್ಲಿ 2 ಬಾರಿ ಹಾಕಿಸಿಕೊಳ್ಳಬೇಕು.
2ನೈಜ ಕೊರೊನಾ ವೈರಸ್‌ಗೆ ಬದಲಾಗಿ ಈ ಲಸಿಕೆಯಲ್ಲಿ ಅದರ ಸಿಂಥೆಟಿಕ್‌ ಜೆನೆಟಿಕ್‌ ಅಂಶವನ್ನು ಬಳಸಿಕೊಳ್ಳಲಾಗಿದೆ.
3ಚೀನದ ವುಹಾನ್‌ನಲ್ಲಿ ಮೊದಲ ಕೊರೊನಾ ವೈರಸ್‌ ಸೋಂಕು ಕಳೆದ ವರ್ಷ ಹೆಚ್ಚು ಕಡಿಮೆ ಇದೇ ಸಮಯದಲ್ಲಿ ವರದಿಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next