Advertisement

ತಡಬೇಲಿ ರಹಿತ ಕಿರುಸೇತುವೆಯಿಂದ ಅಪಾಯ

11:11 PM Jan 18, 2021 | Team Udayavani |

ಬೆಳ್ತಂಗಡಿ: ಉಜಿರೆ ಗ್ರಾ.ಪಂ. ವ್ಯಾಪ್ತಿಯ ಉಜಿರೆ-ಗುರಿಪಳ್ಳ ರಸ್ತೆಯ ಹಲಕ್ಕೆ ಎಂಬಲ್ಲಿ ಅಂಬಡಬೆಟ್ಟು ಹಳ್ಳಕ್ಕೆ ಕಿರು ಸೇತುವೆ ತಡೆಬೇಲಿ ಕಬ್ಬಿಣದ ಪಟ್ಟಿಗಳು ಕಳಚಿದ್ದು, ಶಿಥಿಲಾವಸ್ಥೆಯಲ್ಲಿರುವ ಕಿರು ಸೇತುವೆ ಅಪಾಯ ಆಹ್ವಾನಿಸುವ ಮುನ್ನ ಕ್ರಮ ವಹಿಸಬೇಕಿದೆ.

Advertisement

ಕಳೆದ ಎರಡು ಮಳೆಗಾಲದಲ್ಲೂ ನೀರು ಉಕ್ಕಿ ಹರಿದು ಮರಮಟ್ಟು ಸೇತುವೆ ಯನ್ನು ಹಾನಿಗೊಳಿಸಿತ್ತು. ಸರಕಾರಿ ಬಸ್‌ ಸಹಿತ ಪ್ರತೀದಿನ ನೂರಾರು ವಾಹನಗಳು ಸಂಚರಿಸುವ ಸೇತುವೆ ಅಪಾಯ ದಂಚಿನಲ್ಲಿದೆ.  ಕಲ್ಮಂಜ ಗ್ರಾ.ಪಂ. ವ್ಯಾಪ್ತಿಯ ನಿಡಿಗಲ್‌ನ ಚಾಕೋಟೆಕಟ್ಟೆಯಿಂದ ಗುರಿಪಳ್ಳ, ಬರಯಕನ್ಯಾಡಿ, ಮಂಜೊಟ್ಟಿ ಸುರ್ಯ, ನಡ, ನಾವೂರು, ಇಂದಬೆಟ್ಟು, ಕಾಜೂರು, ಬಂಗಾಡಿ ಮೊದಲಾದ ಕಡೆ ಸಂಪರ್ಕ ಕಲ್ಪಿಸಲು ಇದರ ಮೂಲಕ ಸಾಧ್ಯವಾಗಲಿದೆ.

ಕ್ರಮ ಕೈಗೊಳ್ಳಲಿ :

ಸಂಬಂಧ ಪಟ್ಟವರು ಈ ಬಗ್ಗೆ ಕೂಡಲೇ ಗಮನ ಹರಿಸಿ ಸುಗಮ ವಾಹನ ಸಂಚಾರಕ್ಕೆ ಕೆಲಸ ನಿರ್ವಹಿಸಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ತೀವ್ರ ಹದಗೆಟ್ಟಿದ್ದ ನಿಡಿಗಲ್‌ನಿಂದ ಗುರಿ ಪಳ್ಳ ತನಕದ ರಸ್ತೆಯನ್ನು ಶಾಸಕ ಹರೀಶ್‌ ಪೂಂಜ ಮುತುವರ್ಜಿಯಲ್ಲಿ ದುರಸ್ತಿಗೊಳಿಸಿ ಸಂಚಾರ ಯೋಗ್ಯ ಮಾಡಲಾಗಿದೆ. ಅಲ್ಲದೆ ಅನೇಕ ಕಡೆಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯ ಅಭಿವೃದ್ಧಿಗೆ ಕಾಂಕ್ರೀಟ್‌ ಕಾಮಗಾರಿಗೆ ಅನುದಾನ ಮೀಸಲಿರಿಸಿದ್ದು ಹೆಚ್ಚಿನ ಕಡೆಯ ಕಾಮಗಾರಿ ಪೂರ್ಣ ಗೊಂಡಿದೆ. ಗುರಿಪಳ್ಳ ತನಕ ರಸ್ತೆಯನ್ನು ಅಗಲಗೊಳಿಸಿದರೆ ವಾಹನ ಸವಾರರಿಗೆ ಹೆಚ್ಚಿನ ಅನುಕೂಲವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next