Advertisement

ಇನ್ಮುಂದೆ ಪಿವಿಸಿ ಆಧಾರ್ ಕಾರ್ಡ್..!? ಇಲ್ಲಿದೆ ಸಂಪೂರ್ಣ ಮಾಹಿತಿ

04:41 PM May 27, 2021 | Team Udayavani |

ನವ ದೆಹಲಿ : ಆಧಾರ್ ಕಾರ್ಡ್ ಭಾರತದ ನಾಗರಿಕರ ಗುರುತಿನ ಚೀಟಿ. ಆಧಾರ್ ಕಾರ್ಡ್ ಇಲ್ಲದೇ ಭಾರತದಲ್ಲಿ ಯಾವುದೇ ಸರ್ಕಾರದ ಪ್ರಯೋಜನವನ್ನು ಪಡೆಯುವುದಕ್ಕೆ ಸಾಧ್ಯವಿಲ್ಲ. ಮಾತ್ರವಲ್ಲ ಈಗೀಗ ಖಾಸಗಿ ಸಂಸ್ಥೆಗಳು ಕೂಡ ಎಲ್ಲಾ ವಹಿವಾಟುಗಳಿಗೆ ಆಧಾರ್ ಕಾರ್ಡ್ ನನ್ನು ಕೇಳಿಯೇ ಕೇಳುತ್ತವೆ. ಅಲ್ಲಿಯ ತನಕ ಆಧಾರ್ ಕಾರ್ಡ್ ಮುಖ್ಯ.

Advertisement

ಆಧಾರ್ ಕಾರ್ಡ್ ನಲ್ಲಿ ಸರ್ಕಾರ ಕೆಲವು ಬದಲಾವಣೆಗಳನ್ನು ತಂದಿದೆ. ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಈ ವರ್ಷ ಪಿವಿಸಿ ಆಧಾರ್ ಕಾರ್ಡ್ ನನ್ನು ನೀಡಲು ಮುಂದಾಗಿದೆ.

ಇದನ್ನೂ ಓದಿ :   ತರುಣ್ ತೇಜ್‍ಪಾಲ್ ವಿರುದ್ಧ ಅತ್ಯಾಚಾರ ಪ್ರಕರಣ : ಗೋವಾ ಸರ್ಕಾರ ಹೈಕೋರ್ಟ್ ನಲ್ಲಿ ಮೇಲ್ಮನವಿ

ಯುಐಡಿಎಐ ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಅನೇಕ ಸೇವೆಗಳನ್ನು ಜನರಿಗೆ ಸುಲಭ ಮಾಡಿಕೊಟ್ಟಿದೆ. ಆಧಾರ್ ನಲ್ಲಿರುವ ಫೋಟೋ, ವಿಳಾಸ ಅಥವಾ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಬೇಕಾದರೆ, ಸಣ್ಣ ಪ್ರಕ್ರಿಯೆಯ ಮೂಲಕ ಕುಳಿತಲ್ಲಿಂದಲೇ ಮಾಡಿ ಮುಗಿಸಿಕೊಳ್ಳಬಹುದಾದಂತಹ ಸೌಲಭ್ಯವನ್ನು ಜನರಿಗೆ ನೀಡಿದೆ.

ಆದರೆ, ಯುಐಡಿಎಐ ಈಗ ಆಧಾರ್ ಗೆ ಸಂಬಂಧಿಸಿದ ಬಹುಮುಖ್ಯ ಸೇವೆಯೊಂದನ್ನು ನಿಲ್ಲಿಸಿದೆ. ಹೌದು, ಈ ಮೊದಲು, ಆಧಾರ್ ಕಾರ್ಡ್ ಕಳೆದುಕೊಂಡಿದ್ದರೆ ಅಥವಾ ಹರಿದು ಹೋಗಿದ್ದರೆ,  ಯುಐಡಿಐಎ ವೆಬ್‌ ಸೈಟ್‌ ಮೂಲಕ, ಹೊಸ ಆಧಾರ್ ಕಾರ್ಡ್ ಆರ್ಡರ್ ಮಾಡಿಕೊಳ್ಳಬಹುದಾಗಿತ್ತು.  ಇದಕ್ಕಾಗಿ 50 ರೂ. ಪಾವತಿಸಬೇಕಾಗಿತ್ತು. ಆದರೇ ಆ ಸೌಲಭ‍್ಯವನ್ನು ಇನ್ನು ಮುಂದೆ ಮಾಡಿಕೊಳ್ಳಲು ಸಾಧ್ಯವಿಲ್ಲ.

Advertisement

ಪಿವಿಸಿ ಆಧಾರ್ ಕಾರ್ಡ್ ಎಂದರೇನು..?

ಯುಐಡಿಎಐ ಪಿವಿಸಿ ಸ್ವರೂಪದಲ್ಲಿ ಆಧಾರ್ ಕಾರ್ಡ್ ನನ್ನು ತಯಾರಿಸುತ್ತಿದೆ.  ಡೆಬಿಟ್ ಕಾರ್ಡ್‌ ನನ್ನು ಹೋಲುವ ರೀತಿಯಲ್ಲಿ ಇನ್ನು ಮುಂದೆ ಬರುವ ಆಧಾರ್ ಕಾರ್ಡ್ ಇರಲಿದೆ.   ಯುಐಡಿಎಐ ಹಿಂದೆ ಇದ್ದ ದೊಡ್ಡ ಗಾತ್ರದ ಆಧಾರ್ ಕಾರ್ಡ್ ನ ಮುದ್ರಣ ನಿಲ್ಲಿಸಿದ್ದು,  ಅದನ್ನು ಪಿವಿಸಿ ಆಧಾರ್ ಕಾರ್ಡ್‌ ಗೆ ಸ್ವರೂಪಕ್ಕೆ ಪರಿವರ್ತಿಸುತ್ತಿದೆ.

ಹಳೆಯ ಆಧಾರ್ ಕಾರ್ಡ್ ನನ್ನು ಬದಲಾಯಿಸಿ ಪಿವಿಸಿ ಆಧಾರ್ ಕಾರ್ಡ್ ಪಡೆಯಬಹುದೇ..?

ಖಂಡಿತ ಸಾಧ್ಯವಿದೆ. ಪಿವಿಸಿ ಆ‍ಧಾರ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಯುಐಡಿಎಐ ವೆಬ್‌ಸೈಟ್ ಮೂಲಕ ನಿವು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಪಿವಿಸಿ ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ ? 

  1. ಪಿವಿಸಿ ಆಧಾರ್ ಕಾರ್ಡ್‌ ಗೆ ಅರ್ಜಿ ಸಲ್ಲಿಸಬೇಕಾದರೆ, ಯುಐಡಿಎಐ ವೆಬ್‌ ಸೈಟ್ uidai.gov.in ಅಥವಾ esident.uidai.gov.in ಗೆ ಭೇಟಿ ನೀಡಬೇಕು.
  2. ವೆಬ್‌ ಸೈಟ್‌ನಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ, ವರ್ಚುವಲ್ ಐಡಿ ಸಂಖ್ಯೆ ಅಥವಾ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕು.
  3. 50 ರೂಪಾಯಿ ಶುಲ್ಕವನ್ನು ಪಾವತಿಸುವ ಮೂಲಕ ಪಿವಿಸಿ ಕಾರ್ಡ್ ಗೆ ಅರ್ಜಿ ಸಲ್ಲಸಬಹುದುದಾಗಿದೆ.

ನಿಮ್ಮ ನೊಂದಾಯಿತ ವಿಳಾಸಕ್ಕೆ ನಿಮ್ಮ ಪಿವಿಸಿ ಆಧಾರ್ ಕಾರ್ಡ್ ಪೋಸ್ಟ್ ಮೂಲಕ ತಲುಪುತ್ತದೆ.

ಇದನ್ನೂ ಓದಿ : ಮೇ 27ರಂದು ಒಡಿಶಾ, ಪಶ್ಚಿಮಬಂಗಾಳಕ್ಕೆ ಪ್ರಧಾನಿ ಮೋದಿ ಭೇಟಿ, ವೈಮಾನಿಕ ಸಮೀಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next