ನವದೆಹಲಿ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪ್ರವೇಶ ರದ್ದಾದ ಅಥವಾ ಮತ್ತೂಂದು ವಿಶ್ವವಿದ್ಯಾಲಯಕ್ಕೆ ಮರುಪ್ರವೇಶ ಸಂಬಂಧ ದೇಶದ ವಿಶ್ವವಿದ್ಯಾಲಯಗಳಿಂದ ಸುಮಾರು 30 ಕೋಟಿ ರೂ.ಗಳನ್ನು ಯುಜಿಸಿ ಹಿಂಪಡೆದಿದೆ.ಜತೆಗೆ ಆ ಮೊತ್ತವನ್ನು 14,443 ವಿದ್ಯಾರ್ಥಿಗಳಿಗೆ ಮರುಪಾವತಿಸಲಾಗಿದೆ ಎಂದು ಯುಜಿಸಿ ಅಧ್ಯಕ್ಷ ಎಂ.ಜಗದೀಶ್ ಕುಮಾರ್ ಹೇಳಿದರು.
ಈ ಕುರಿತು ಮಾಹಿತಿ ನೀಡಿದ ಅವರು, “ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಮಧ್ಯಮ ಮತ್ತು ಕೆಳಮಧ್ಯಮ ಆರ್ಥಿಕ ವರ್ಗದಿಂದ ಬರುತ್ತಾರೆ. ಅವರಿಗೆ ಮತ್ತೊಂದು ಉತ್ತಮ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆಯುವ ಸ್ವಾತಂತ್ರ್ಯ ಇರಬೇಕು.
ಹಾಗಾಗಿ ಪ್ರವೇಶ ರದ್ದಾದ ಅಥವಾ ಮತ್ತೊಂದು ವಿಶ್ವವಿದ್ಯಾಲಯಕ್ಕೆ ಮರುಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿಸಲಾಗಿದೆ,’ ಎಂದರು.