ನವದೆಹಲಿ: ವಿಶ್ವವಿದ್ಯಾಲಯ ಅನುದಾನ ಆಯೋಗದ ರಾಷ್ಟ್ರೀಯ ಅರ್ಹತಾ ಪರೀಕ್ಷೆ(ಯುಜಿಸಿ-ಎನ್‌ಇಟಿ)ಯನ್ನು ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ನಡೆಸಲಾಗುವುದು.
2021ರ ಡಿಸೆಂಬರ್ ಮತ್ತು 2022ರ ಜೂನ್‌ನ ಒಟ್ಟು ಎರಡು ಅವಧಿಯ ಪರೀಕ್ಷೆಯನ್ನು ಒಮ್ಮೆಲೆ ನಡೆಸಲಾಗುವುದು ಎಂದು ಯುಜಿಸಿ ಅಧ್ಯಕ್ಷ ಎಂ. ಜಗದೀಶ್ ಕುಮಾರ್ ತಿಳಿಸಿದ್ದಾರೆ.
ಮುಂದಿನ ತಿಂಗಳ 8, 9, 11, 12 ಮತ್ತು ಆ.12, 13 ಮತ್ತು 14ರಂದು ಪರೀಕ್ಷೆ ನಡೆಯಲಿದೆ.
ಇದನ್ನೂ ಓದಿ:ಅಜಂಗಢ, ರಾಮ್‌ಪುರ ಗೆಲುವು : ಡಬಲ್ ಇಂಜಿನ್ ಪರಿಣಾಮ ಎಂದ ಪ್ರಧಾನಿ, ಯೋಗಿ
Related Articles
ವಿಷಯವಾರು ವಿವರವಾದ ವೇಳಾ ಪಟ್ಟಿಯನ್ನು ಶೀಘ್ರವೇ ಯುಜಿಸಿ-ಎನ್‌ಇಟಿ ವೆಬ್‌ಸೈಟ್ nta.ac.in ಅಥವಾ ugcnet.nta.nic.in ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.