Advertisement

ಫೆ.23ರಿಂದ ಮಾ.10ರವರೆಗೆ ಯುಜಿಸಿ ನೆಟ್‌

07:15 PM Dec 29, 2022 | Team Udayavani |

ನವದೆಹಲಿ: ಸಹಾಯಕ ಪ್ರೊಫೆಸರ್‌ಗಳ ಹುದ್ದೆಗೆ ನಡೆಯುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ(ಎನ್‌ಇಟಿ)ಯನ್ನು ಫೆಬ್ರವರಿ 23ರಿಂದ ಮಾರ್ಚ್‌ 10ರವರೆಗೆ ನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ) ನಿರ್ಧರಿಸಿದೆ. 83 ವಿಷಯಗಳಲ್ಲಿ ಈ ಕಂಪ್ಯೂಟರ್‌ ಆಧಾರಿತ ಪರೀಕ್ಷೆ ನಡೆಯಲಿದೆ.

Advertisement

ಜೆಆರ್‌ಎಫ್ ಮತ್ತು ಸಹಾಯಕ ಪ್ರೊಫೆಸರ್‌ಗಳ ಆಯ್ಕೆಗೆ ನಡೆಯುವ ಯಜಿಸಿ-ನೆಟ್‌ ಪರೀಕ್ಷೆಗೆ ಆನ್‌ಲೈನ್‌ ಅರ್ಜಿಯನ್ನು ಡಿ.29ರಿಂದ ಜ.17ರವರೆಗೆ ಸ್ವೀಕರಿಸಲಾಗುವುದು. ಫೆ.23ರಿಂದ ಮಾ.10ರವರೆಗೆ ಪರೀಕ್ಷೆ ನಡೆಯಲಿದೆ ಎಂದು ಯುಜಿಸಿ ಅಧ್ಯಕ್ಷ ಎಂ. ಜಗದೇಶ್‌ ಕುಮಾರ್‌ ಹೇಳಿದ್ದಾರೆ. ಈ ಪರೀಕ್ಷೆಯು ವರ್ಷಕ್ಕೆ 2 ಬಾರಿ ನಡೆಯುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next