Advertisement

ಪ್ರತಿಭಟನಾ ಅಂಗಳದಲ್ಲಿ ಯುಗಾದಿ

04:30 PM Apr 13, 2021 | Team Udayavani |

ಮಂಡ್ಯ: ಕಳೆದ 23 ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸ್ವಂತ ಮನೆನಮ್ಮ ಹಕ್ಕು ಹೋರಾಟ ಸಮಿತಿಯಸೂರಿಲ್ಲದವರು ಪ್ರತಿಭಟನೆ ನಡೆಸುತ್ತಿದ್ದು,ಈ ಮಧ್ಯೆ ಯುಗಾದಿ ಹಬ್ಬ ಎದುರಾದಹಿನ್ನೆಲೆ ಪ್ರತಿಭಟನಾ ಅಂಗಳದಲ್ಲಿಯೇಹಬ್ಬ ಆಚರಣೆ ಮಾಡುವ ಮೂಲಕಪ್ರತಿಭಟನೆ ಮುಂದುವರಿಸಲಾಗುವುದು ಎಂದು ಸಮಿತಿಯ ಮುಖಂಡ ಎಂ.ಬಿ.ನಾಗಣ್ಣಗೌಡ ತಿಳಿಸಿದರು.

Advertisement

ಪ್ರತಿಭಟನೆ ಅಂಗಳದಲ್ಲಿ ಎಳ್ಳು, ಬೆಲ್ಲ ನೀಡಿ, ಹಬ್ಬ ಆಚರಣೆ ಮಾಡಲಾಗುವುದು. ಹಬ್ಬಕ್ಕೆ ಮಂಡ್ಯ ಜಿಲ್ಲಾಧಿಕಾರಿ, ಅಪರ ಜಿಲ್ಲಾಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್‌ ಶಾಸಕರು ಹಾಗೂ ಜನಪ್ರತಿನಿಧಿಗಳುಸೇರಿದಂತೆ ಜಿಲ್ಲಾಡಳಿತವನ್ನು ಆಹ್ವಾನಿಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ವಿನೂತನ ಪ್ರತಿಭಟನೆ ಮಾಡುವ ಮೂಲಕ ಜಿಲ್ಲಾಡಳಿತಕ್ಕೆ ಶಾಶ್ವತ ಸೂರಿನಅನಿವಾರ್ಯತೆಯನ್ನು ಮನದಟ್ಟು ಮಾಡಿಕೊಡಲಾಗುವುದು. ಎ.13ರಂದುಮಧ್ಯಾಹ್ನ 2ಕ್ಕೆ ಹಬ್ಬದ ಸಿಹಿ ಊಟ ಹಾಗೂಮಾರನೇ ದಿನ ಮಾ.14ಕ್ಕೆ ಮಾಂಸಾಹಾರಊಟ ಮಾಡಲಾಗುವುದು. ಈ ವಿನೂತನಪ್ರತಿಭಟನೆ ಹಬ್ಬದಲ್ಲಿ ಭಾಗವಹಿಸಿಹೋರಾಟಕ್ಕೆ ಬೆಂಬಲ ನೀಡಿ ಎಂದು ಮನವಿ ಮಾಡಿದರು.

ಈಗಾಗಲೇ ಹತ್ತಾರು ಸಂಘ ಸಂಸ್ಥೆಗಳುಹೋರಾಟಕ್ಕೆ ಬೆಂಬಲ ನೀಡಿರುವುದುಹೋರಾಟಕ್ಕೆ ಶಕ್ತಿ ತುಂಬಿದಂತಾಗಿದೆ. ಜಿಲ್ಲಾಧಿಕಾರಿಗಳ ಭರವಸೆ ಈಡೇರುವನಂಬಿಕೆಯಿದ್ದು, ಕಾರ್ಯಗತಗೊಳ್ಳದಿದ್ದರೆ,ಹೋರಾಟದ ರೂಪುರೇಷೆ ಕುರಿತುಜಿಲ್ಲೆಯ ಸಂಘ ಸಂಸ್ಥೆಗಳು,ಹೋರಾಟಗಾರರೊಂದಿಗೆ ಚರ್ಚಿಸಿತೀರ್ಮಾನ ಕೈಗೊಳ್ಳಲಾಗುವುದು ಎಂದುಹೇಳಿದರು. ಗೋಷ್ಠಿಯಲ್ಲಿ ಸಮಿತಿಯ ಬಿ.ಕೆ.ಸತೀಶ್‌, ಸವಿತಾ, ಕಾಮಾಕ್ಷಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next