Advertisement

Udupi: ಉಡುಪಿ ರಸ್ತೆಯ ಹೊಂಡ ಅಳತೆಗೈದ ಯಮಧರ್ಮ-ಚಿತ್ರಗುಪ್ತ! 

06:20 PM Aug 27, 2024 | Team Udayavani |

 ಉಡುಪಿ:  ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಗರದಲ್ಲಿವಿವಿಧ ವೇಷ ಭೂಷಣಗಳ ತೊಟ್ಟು ವಿನೋದಾವಳಿ ಪ್ರದರ್ಶಿಸುತ್ತಿದ್ದರೆ, ಈ ವೇಷಧಾರಿಗಳು ಹಲವು ದಿನಗಳಿಂದ ಸಾರ್ವಜನಿಕರಿಗೆ ಸಂಚರಿಸಲು ಸಮಸ್ಯೆಯಾಗಿರುವ ರಸ್ತೆಗಳ ದುರಸ್ತಿಗಾಗಿ ಆಗ್ರಹಿಸಿ  ವಿಶಿಷ್ಟವಾಗಿ ಪ್ರತಿಭಟಿಸಿ ಜನರ ಗಮನ ಸೆಳೆದಿದ್ದಾರೆ.

Advertisement

ಈ ರಸ್ತೆಯಲ್ಲಿ ಸಂಚರಿಸಿದರೆ ಅಪಾಯ ಖಚಿತ.. ಯಮಧರ್ಮನೂ ಅಳತೆ ಮಾಡುವಷ್ಟು ಗುಂಡಿಗಳು ಬಿದ್ದಿವೆ..  ಇದು ಆದಿ ಉಡುಪಿ-ಮಲ್ಪೆೆ ಸಂಪರ್ಕಿಸುವ ರಸ್ತೆಯಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಸಂದರ್ಭದಲ್ಲಿ  ವೇಷಧಾರಿಗಳು ಯಮಧರ್ಮ, ಚಿತ್ರಗುಪ್ತ ಹಾಗೂ ಪ್ರೇತಾತ್ಮದ ವೇಷತೊಟ್ಟು ರಸ್ತೆಯಲ್ಲಿ ಲಾಂಗ್‌ಜಂಪ್‌ ಮಾಡುವ ಮೂಲಕ ಅಪಾಯ ಕಟ್ಟಿಟ್ಟಬುತ್ತಿ ಎಂದು ಸಾರುವ ಅಣಕು ಪ್ರದರ್ಶಿಸಿ ವಿಶಿಷ್ಟವಾಗಿ ಪ್ರತಿಭಟಿಸಿದ ದೃಶ್ಯ ಜನರ ಗಮನಸೆಳೆಯಿತು.

ಸಾರ್ವಜನಿಕರಿಂದ ಬೆಂಬಲ:
ಯಮಧರ್ಮ, ಚಿತ್ರಗುಪ್ತ ಹಾಗೂ ಪ್ರೇತಾತ್ಮದ ವೇಷತೊಟ್ಟು ರಸ್ತೆಯಲ್ಲಿ ಲಾಂಗ್‌ಜಂಪ್‌ ಮಾಡುತ್ತಿದ್ದರೆ ನೆರೆದವರು ಶಿಳ್ಳೆೆ-ಸೀಟಿ ಹೊಡೆದು ಸಾಥ್ ನೀಡಿದರು. ಯಾವ ಪ್ರೇತ ಎಷ್ಟು ದೂರು ಜಂಪ್ ಮಾಡಿದೆ ಎಂಬುದು ಯಮಧರ್ಮವೇಷ ಧರಿಸಿದ ವೇಷಧಾರಿ ಅಳತೆ ಮಾಪನದ ಮೂಲಕ ಗುರುತಿಸಿದ ಘಟನೆ ನಡೆಯಿತು.  ಹಲವು ಸಮಯದಿಂದ ರಸ್ತೆಯಲ್ಲಿನ ಹೊಂಡ- ಗುಂಡಿಗಳಿಂದಾಗಿ ಸಾರ್ವಜನಿಕರು ರಸ್ತೆೆಯಲ್ಲಿ ಸಂಚರಿಸುವುದೇ ದುಸ್ತರವಾಗಿತ್ತು.

ಇಲ್ಲಿನ ರಸ್ತೆೆ ಸಮಸ್ಯೆೆಯ ಬಗ್ಗೆೆ ಹಲವಾರು ಬಾರಿ ಜನಪ್ರತಿನಿಧಿಗಳು ಹಾಗೂ  ಜಿಲ್ಲಾಡಳಿತದ ಗಮನಕ್ಕೆೆ ತಂದರೂ ಪ್ರಯೋಜನವಾಗಿಲ್ಲ. ಉಡುಪಿಯ ವಿಶೇಷ ಹಬ್ಬವಾದ ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ವೇಷಧಾರಿಗಳು ವಿನೂತನ ಪ್ರತಿಭಟನೆ ನಡೆಸಿ ಗಮನಸೆಳೆಯುವ ಕೆಲಸ ಮಾಡಿದ್ದು, ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನಹರಿಸಿ ಇಲ್ಲಿನ ಹೊಂಡ-ಗುಂಡಿ ರಸ್ತೆೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next